Advertisement

ಊಟ ತಿಂಡಿ ಫ್ರೀ, ನಿಮಿಷಕ್ಕೆ ಐದು ರೂಪಾಯಿ

04:12 PM Jan 28, 2017 | Team Udayavani |

ತಿಂಡಿ ಉಚಿತ. ಆದರೆ ಸಮಯಕ್ಕೆ ದುಡ್ಡು ಕೊಡಬೇಕು. ಹೀಗೊಂದು ಇಂಟರೆಸ್ಟಿಂಗ್‌ ಹೋಟೆಲಿದೆ. ಅದರ ಹೆಸರು ಮಿನ್ಯೂಟ್‌ ಬಿಸ್ಟ್ರೋ ಅಂತ.  ನೀವು ಇಲ್ಲಿಗೆ ಹೋದರೆ ತಿಂಡಿಗೆ ದುಡ್ಡು ನೀಡಬೇಕಿಲ್ಲ. ಆ ಹೋಟೆಲ್‌ನಲ್ಲಿ ಎಷ್ಟು ಸಮಯ ಕಳೆಯುತ್ತೀರೋ ಆ ಸಮಯಕ್ಕೆ ದುಡ್ಡು ನೀಡಬೇಕು. ಉದಾಹರಣೆಗೆ ನೀವು ಆ ಹೋಟೆಲಲ್ಲಿ ಒಂದು ಗಂಟೆ ಕಳೆಯುತ್ತೀರಿ ಅಂತಿಟ್ಟುಕೊಳ್ಳಿ. ಆಗ ನೀವು ಅಲ್ಲಿ ನಿಮಿಷಕ್ಕೆ ಐದು ರೂಪಾಯಿಯಂತೆ ಮೂರು ನೂರು ರೂಪಾಯಿ ಕೊಡಬೇಕು. ತಿಂಡಿಗೆ ದುಡ್ಡು ನೀಡಬೇಕಿಲ್ಲ. 

Advertisement

ವಿದೇಶಗಳಲ್ಲಿ ಈ ಥರದ ಪೇ ಪರ್‌ ಮಿನಿಟ್‌ ಕೆಫೆಗಳಿವೆ. ಅದನ್ನು ನೋಡಿದ ಇನಾಯತ್‌ ಅನ್ಸಾರಿಯವರು ನಿಖೀಲ್‌ ಕಾಮತ್‌ ಅವರ ಜೊತೆ ಸೇರಿಕೊಂಡು ಈ ಮಿನ್ಯೂಟ್‌ ಬಿಸ್ಟ್ರೋ ಎಂಬ ಕೆಫೆಯನ್ನು ಆರಂಭಿಸಿದ್ದಾರೆ. ಇದೊಂದು ಬೆಂಗಳೂರಿಗೆ ತುಂಬಾ ಹೊಸದು ಅನ್ನಿಸುವ ಕಾನ್ಸೆಪ್ಟ್. ಆರಾಮಾಗಿ ಕೂತು ಮಾತಾಡಲು, ಹರಟಲು ಇರುವ ಒಂದು ನೆಮ್ಮದಿಯ ತಾಣ. ಮಧ್ಯಾಹ್ನ ಹೋದರೆ ಬಫೆ ಇರತ್ತೆ. ತುಂಬಾ ಕಾಯಬೇಕಾಗಿಯೂ ಇಲ್ಲ. ಸಂಜೆ ಮಾಂಸಾಹಾರವೂ ಇರುವುದರಿಂದ ನಿಮಿಷಕ್ಕೆ 8 ರೂಪಾಯಿ ನಿಗದಿಗೊಳಿಸಲಾಗಿದೆ.

ಯಾಕೆ ಹೋಗಬೇಕು?
– ಆರಾಮಾಗಿ ಒಂದು ಕಡೆ ಕೂತು ಫ್ರೆಂಡ್ಸ್‌ ಜೊತೆ ತಿಂಡಿ ತಿನ್ನುತ್ತಾ ಹರಟಲು.
– ಏನಾದರೂ ಕೆಲಸವಿದ್ದರೆ ಯಾರ ತೊಂದರೆಯೂ ಇಲ್ಲದೆ ಕೆಲಸ ಮಾಡಲು.
– ಎಲ್ಲೋ ಒಂದು ಕಡೆ ಕೂತು ಪುಸ್ತಕ ಓದುವ ಆಸೆಯನ್ನು ಪೂರೈಸಲು.
– ನಾಲ್ಕೈದು ಜನ ಲ್ಯಾಪ್‌ಟಾಪ್‌ನಲ್ಲಿ ಸಿನಿಮಾ ನೋಡಲು.
– ನೀವೇ ಮನೆಯಿಂದ ಊಟ ತಂದಿದ್ದರೂ ಅದನ್ನು ಇಲ್ಲಿ ಕೂತು ಊಟ ಮಾಡಬಹುದು.

ಎಲ್ಲಿ- 419, ಐಸಿಐಸಿಐ ಬ್ಯಾಂಕ್‌ ಮೇಲ್ಗಡೆ, 2ನೇ ಮುಖ್ಯರಸ್ತೆ, ಕಸ್ತೂರಿ ನಗರ
ದೂ- 99161 73613
ಫೇಸ್‌ಬುಕ್‌-https://www.facebook.com/theminutebistro/timeline

ವೆಬ್‌ಸೈಟ್‌-  //theminutebistro.com/

Advertisement
Advertisement

Udayavani is now on Telegram. Click here to join our channel and stay updated with the latest news.

Next