Advertisement

ಉಚಿತ ಕಾನೂನು ಸಲಹಾ ಕೇಂದ್ರ ಉದ್ಘಾಟನೆ

05:46 PM Aug 11, 2017 | |

ಬೀದರ: ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸಾರ್ವಜನಿಕರು, ರೋಗಿಗಳು, ಸಿಬ್ಬಂದಿಗಳಿಗೆ ಕಾನೂನು ತಿಳಿವಳಿಕೆ ನೀಡುವ ಉದ್ದೇಶದಿಂದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಆರಂಭಿಸಿರುವ ಉಚಿತ ಕಾನೂನು ಸಲಹಾ ಕೇಂದ್ರವನ್ನು ಜಿಲ್ಲಾ ಪ್ರಧಾನ-ಸತ್ರ ನ್ಯಾಯಾಧೀಶರು ಹಾಗೂ ಪ್ರಾಧಿಕಾರದ ಅಧ್ಯಕ್ಷ ಎಂ.ಎಸ್‌. ಪಾಟೀಲ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಆಸ್ಪತ್ರೆಯಲ್ಲಿನ ರೋಗಿಗಳು ಹಾಗೂ ಅವರ ಸಹಾಯಕರಿಗೆ ಅನಾನುಕೂಲತೆಗಳಾದಲ್ಲಿ ಕಾನೂನಿನ ಮೊರೆಹೋಗಿ, ತಮ್ಮ
ಸಮಸ್ಯೆ ಬಗೆಹರಿಸಿಕೊಳ್ಳುವ ಅವಕಾಶ ಇಲ್ಲಿರುವುದರಿಂದ ಸಾರ್ವಜನಿಕರು ಈ ಸಲಹಾ ಕೇಂದ್ರದ ಸದುಪಯೋಗ ಪಯಬೇಕು ಎಂದು ಕರೆ ನೀಡಿದರು. ಕೇಂದ್ರದಲ್ಲಿ ಇಬ್ಬರು ನ್ಯಾಯವಾದಿಗಳು ಸಾರ್ವಜನಿಕರಿಗೆ ಕಾನೂನು ತಿಳಿವಳಿಕೆ ನೀಡುವರು. ಹೆಚ್ಚಿನ ಕಾನೂನು ಅವಶ್ಯಕತೆ ಇದ್ದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಂಪರ್ಕಿಸಬಹುದು ಎಂದು ಹೇಳಿದರು. ಹೆಚ್ಚುವರಿ ಪ್ರಧಾನ ಸತ್ರನ್ಯಾಯಾಧೀಶ ಬಿ.ನಂಜುಂಡಯ್ಯ, ಜಿಲ್ಲಾ ಆರೊಗ್ಯ ಅ ಧಿಕಾರಿ ಡಾ| ಎಂ.ಎ. ಜಬ್ಟಾರ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಸಿ.ಎಚ್‌. ರಗಟೆ, ಜಿಲ್ಲಾ ಏಡ್ಸ್‌ ನಿಯಂತ್ರಣ ಅ ಧಿಕಾರಿ ಡಾ| ಮಾರ್ತಂಡರಾವ್‌ ಖಾಶೆಂಪುರಕರ್‌, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಎಚ್‌.
ಪಾಟೀಲ, ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಬಿರಾದಾರ, ಉಪಾಧ್ಯಕ್ಷ ಸಂಜೀವಕುಮಾರ ರೆಡ್ಡಿ ಹಾಗೂ ವೈದ್ಯರು, ಸಿಬ್ಬಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next