Advertisement

‘ಫ್ರೀ ಕಾಶ್ಮೀರ’: ಫಲಕ ಹಿಡಿದವರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ

09:59 AM Jan 15, 2020 | keerthan |

ಮೈಸೂರು: ‘ಫ್ರೀ ಕಾಶ್ಮೀರ’ ಫಲಕ ಹಿಡಿದವರ ಪರವಾಗಿ ವಕಾಲತ್ತು ವಹಿಸದಿರಲು ಮೈಸೂರು ವಕೀಲರ ಸಂಘ ತೀರ್ಮಾನಿಸಿದೆ.

Advertisement

ರಾಷ್ಟ್ರದ್ರೋಹ ಪ್ರಕರಣದ ಪರ ವಕಾಲತ್ತು ವಹಿಸಬಾರದು ಎಂದು ಮೈಸೂರು ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮೈಸೂರು ವಕೀಲರ ಸಂಘದ ತೀರ್ಮಾನದ ಬಗ್ಗೆ ಸುತ್ತೋಲೆ ಹೊರಡಿಸಿ ಸೂಚಿಸಲಾಗಿದೆ.

ಆರೋಪಿ ನಳಿನಿ ಬಾಲಕುಮಾರ್ ಪರ ವಕಾಲತ್ತು ವಹಿಸಿದ್ದ ವಕೀಲ ಪೃಥ್ವಿ‌ಕಿರಣ್ ಶೆಟ್ಟಿ ಪ್ರಕರಣದಿಂದ ಈಗಾಗಲೇ ಹಿಂದೆ ಸರಿದಿದ್ದಾರೆ. ಇವರು ನಳಿನಿ‌ಗೆ ಷರತ್ತುಬದ್ಧ ಮಧ್ಯಂತರ ಜಾಮೀನು ಪಡೆಯಲು ವಕಾಲತ್ತು ವಹಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನಳಿನಿ ಅವರು ಇಂದು ಕೋರ್ಟ್‍ಗೆ ಆಗಮಿಸಿದ್ದರು.

‘ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವಂತಹ ವಿಚಾರವಾದ್ದರಿಂದ ‘ಫ್ರೀ ಕಾಶ್ಮೀರ’ ಪ್ಲೇಕಾರ್ಡ್‍ ಪ್ರದರ್ಶಿಸಿ ಆರೋಪ ಎದುರಿಸುತ್ತಿರುವವರ ಪರ ವಕಾಲತ್ತು ವಹಿಸಬಾರದು ಎಂದು ಸಂಘದಿಂದ ತೀರ್ಮಾನಿಸಲಾಗಿದೆ ಎಂದು ಮೈಸೂರು ವಕೀಲರ ಸಂಘದ ಕಾರ್ಯದರ್ಶಿ ಬಿ.  ಶಿವಣ್ಣ ಪತ್ರಿಕೆಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next