Advertisement

1500 ಕ್ಯಾಬ್‌ ಚಾಲಕರಿಗೆ ಉಚಿತ ಐಟಿ ರಿಟನ್ಸ್‌

12:20 PM Mar 28, 2018 | |

ಯಲಹಂಕ: ನಗರದ ಒಂದೂವರೆ ಸಾವಿರ ಕ್ಯಾಬ್‌ ಚಾಲಕರಿಗೆ ಉಚಿತವಾಗಿ ಕ್ಯಾಬ್‌ ಡಾಸ್‌ ಸಂಸ್ಥೆಯಿಂದ ಆದಾಯ ತೆರಿಗೆ ರಿಟನ್ಸ್‌ ಪೈಲ್‌ನ್ನು ಮಾಡಿಕೊಡಲಾಗಿದೆ ಎಂದು ಕ್ಯಾಬ್‌ ಡಾಸ್ಟ್‌ ಸಂಸ್ಥೆಯ ಸಂಸ್ಥಾಪಕಿ ಯಮುನಾ ಶಾಸಿ ಹೇಳಿದರು.

Advertisement

ಅಂತಾರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಡ್ರೆ„ವರ್‌ಗಳ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮೂರು ದಿನಗಳ ಕಾರ್ಯಾಗಾರದಲ್ಲಿ ಕ್ಯಾಬ್‌ ಚಾಲಕರಿಗೆ ಆಧಾರ್‌-ಪ್ಯಾನ್‌ಕಾರ್ಡ್‌ ಸೇರ್ಪಡೆ ಮತ್ತು ಆದಾಯ ತೆರಿಗೆ ರಿಟರ್ನ್ಸ್ ಪೈಲ್‌ ಉಚಿತ ಮಾಡಿಕೊಡುವುದು ಮತ್ತು ಹಣಕಾಸಿನ ನಿರ್ವಹಣೆ ಬಗ್ಗೆ ಸಲಹೆ ನೀಡುವ ಕಾರ್ಯಕ್ರಮವನ್ನು ರಾಷ್ಟ್ರದಲ್ಲೇ ಇದೇ ಮೊದಲು ಬೆಂಗಳೂರಿನಲ್ಲಿ ಮಾಡಲಾಗುತ್ತಿದೆ ಎಂದು ಹೇಳಿದರು.

ಕಳೆದ ಎರಡೂವರೆ ವರ್ಷದ ಮೂರು ಕಾರ್ಯಾಗಾರದಲ್ಲಿ ಬೆಂಗಳೂರಿನ 5500ಟ್ಯಾಕ್ಸಿ ಚಾಲಕರಿಗೆ ಒಂದು ಕೋಟಿರೂಗೂ ಹೆಚ್ಚು ಟಿಡಿಎಸ್‌ ಮರುಪಾವತಿಯಾಗಿದೆ. ಬೆಂಗಳೂರಿನ ಮಲ್ಲೇಶ್ವರಂ, ಸೇರಿದಂತೆ ವಿಮಾನ ನಿಲ್ದಾಣದಲ್ಲಿ ಇದೇ ಮೂರನೆಯ ಕಾರ್ಯಾಗಾರವಾಗಿದೆ. ಇಲ್ಲಿ ಮೂರು ಸಾವಿರ ಚಾಲಕರು ಆದಾಯ ತೆರಿಗೆ ರಿಟರ್ನ್ಸ್ ಪೈಲ್‌ ಮಾಡಿಕೊಳ್ಳಲು ನೋಂದಣಿಯಾಗಿದ್ದಾರೆ. ಇನ್ನೂ ಒಂದೂವರೆ ಸಾವಿರ ಚಾಲಕರ ನೋಂದಣಿಗೆ ಕ್ರಮ ವಹಿಸಲಾಗಿದೆ ಎಂದರು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿತ್ಯಕಾರ್ಯಾಚರಣೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಅರುಣಾಚಲಂ, ಮಾರುತಿ ಸುಝೂಕಿ ವಲಯ ವ್ಯವಸ್ಥಾಪಕ ವಿಶಾಲ್‌ ಆಮ್ಲ ಮಾತನಾಡಿದರು. ಉಪಾಧ್ಯಕ್ಷ ಮಾಂಡವಿ ಮೋಟರ್ ಯಶವಂತ ರಾಯ್‌ ಮತ್ತಿತರರು ಹಾಜರಿದ್ದರು. ಉಚಿತ ಆರೋಗ್ಯ ತಪಾಣಸಣೆ ಶಿಬಿರದಲ್ಲಿ ನೂರಾರು ಚಾಲಕರು ಸರದಿ ಸಾಲಿನಲ್ಲಿ ನಿಂತು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next