Advertisement

Kambala ಕ್ಷೇತ್ರದವರಿಗೆ ಉಚಿತ ವಿಮೆ ಸೌಲಭ್ಯ

12:24 AM May 21, 2024 | Team Udayavani |

ಮೂಡುಬಿದಿರೆ: ಯಕ್ಷಧ್ರುವ ಪಟ್ಲ ಫೌಂಡೇಶನ್‌ ವತಿಯಿಂದ ಕಂಬಳ ಕ್ಷೇತ್ರದ ಓಟಗಾರರು, ತೀರ್ಪುಗಾರರು, ಪರಿಚಾರಕರೂ ಸೇರಿದಂತೆ ಸುಮಾರು 300 ಮಂದಿಗೆ ಉಚಿತ ವಿಮಾ ಯೋಜನೆಯನ್ನು ಅಳವಡಿಸಲು ಸಿದ್ಧತೆ ನಡೆದಿದೆ ಎಂದು ಅವಿಭಜಿತ ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

Advertisement

ದ.ಕ. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ|ದೇವಿಪ್ರಸಾದ್‌ ಶೆಟ್ಟಿ ಬೆಳಪು ಹಾಗೂ ಪದಾಧಿಕಾರಿಗಳ ವಿನಂತಿಯನ್ನು ಪುರಸ್ಕರಿಸಿ ಪಟ್ಲ ಫೌಂಡೇಶನ್‌ಅಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಹಾಗೂ ಪದಾಧಿ ಕಾರಿಗಳು ಕಂಬಳ ರಂಗದವರಿಗೆ ಉಚಿತ ವಿಮಾಯೋಜನೆಯನ್ನು ಒದಗಿಸಿಕೊಡಲು ಒಪ್ಪಿರುವುದಾಗಿ ತಿಳಿಸಿದ ಅವರು ಕಂಬಳದ ಕೋಣಗಳ ಮಾಲ
ಕರು, ಓಟಗಾರರು ಹಾಗೂ ಪರಿವಾರ ವರ್ಗದವರ ಅಗತ್ಯವನ್ನು ಪರಿಗಣಿಸಿ ಉಚಿತ ವಿಮೆಯನ್ನು ಜಾರಿಗೊಳಿಸ ಲಾಗುವುದು ಎಂದರು.

ಮಂಗಳೂರಿನ ಅಡ್ಯಾರ್‌ ಗಾರ್ಡನ್‌ನಲ್ಲಿ ಮೇ 26ರಂದು ನಡೆಯುವ “ಪಟ್ಲ ಸಂಭ್ರಮ- 2024′ ಸಮಾರಂಭದಲ್ಲಿ ಈ ಯೋಜನೆಯನ್ನು ಅನಾವರಣಗೊಳಿಸಲಾಗುವುದು. ಪ್ರಯೋಜನ ಪಡೆಯಲು ಆಸಕ್ತರು 2 ಫೋಟೋ, ಆಧಾರ್‌ ಕಾರ್ಡ್‌ ಪ್ರತಿ, ನಾಮಿನಿಯವರ ಆಧಾರ್‌ ಕಾರ್ಡ್‌ ಪ್ರತಿ ಹಾಗೂ 1 ಫೋಟೋದೊಂದಿಗೆ ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಶೆಟ್ಟಿ ಮತ್ತು ತೀರ್ಪುಗಾರರ ಸಂಚಾಲಕ ವಿಜಯ ಕುಮಾರ್‌ ಕಂಗಿನಮನೆ ಅವರನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ಅಪಘಾತದಿಂದ ಜೀವಹಾನಿ ಯಾದಲ್ಲಿ 10 ಲಕ್ಷ ರೂ., ಅಂಗಾಂಗ ಹಾನಿಗೆ 2 ಲಕ್ಷ ರೂ. ಮತ್ತು ವೈದ್ಯಕೀಯ ಸರ್ಟಿಫಿಕೆಟ್‌ ಸಹಿತವಾಗಿ ತಿಂಗಳುಗಟ್ಟಲೇ ದುಡಿಯಲು ಕಷ್ಟಕರ ಸನ್ನಿವೇಶಗಳು ಎದುರಾದಲ್ಲಿ ತಿಂಗಳಿಗೆ 1,000 ರೂ. ದೊರೆಯಲಿದೆ ಎಂದು ಡಾ| ದೇವಿಪ್ರಸಾದ ಶೆಟ್ಟಿ ಬೆಳಪು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next