Advertisement

ನುಡಿದಂತೆ ನಡೆಯುತ್ತಿರುವ ಎನ್.ಎಸ್ ವಿನಯ್ ಬೆಂಬಲಿಸಿ:  ನಟ ನೆನಪಿರಲಿ ಪ್ರೇಮ್

05:26 PM Apr 06, 2022 | Team Udayavani |

ಪಿರಿಯಾಪಟ್ಟಣ: ದಕ್ಷಿಣ ಪದವೀಧರರ ವೇದಿಕೆಯ ವತಿಯಿಂದ ನೋಂದಣಿ ಮಾಡಿಸಿದ ಪದವಿಧರರಿಗೆ 1 ಲಕ್ಷ ರೂಗಳ ಉಚಿತ ಇನ್ಸುರೆನ್ಸ್ ಬಾಂಡನ್ನು ಚಲನಚಿತ್ರ ನಟ ನೆನಪಿರಲಿ ಪ್ರೇಮ್ ವಿತರಿಸಿದರು.

Advertisement

ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಪದವಿಧರರಿಗೆ ಸಾಂಕೇತಿಕವಾಗಿ ಉಚಿತ ಬಾಂಡ್ ವಿತರಿಸಿ ಮಾತನಾಡಿದರು.

ದಕ್ಷಿಣ ಪದವೀಧರರ ವೇದಿಕೆ ಅಧ್ಯಕ್ಷ ಎನ್.ಎಸ್.ವಿನಯ್ ರವರಿಗೆ ಸಾಮಾಜಿಕವಾಗಿ ಕೆಲಸ ಮಾಡುವ ಹಂಬಲವಿದ್ದು, ಜನಸೇವೆಗಾಗಿ ಅವರು ರಾಜಕೀಯ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಇವರು ಹಣ ಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಬರುತ್ತಿಲ್ಲ. ಸಾಮಾಜಿಕವಾಗಿ ಕಳಕಳಿಯನ್ನು ಹೊಂದಿರುವ ಯುವಕರು ತಮಗಿಷ್ಟ ಬಂದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಸಮಾಜಸೇವೆ ಮಾಡಲು ಮುಂದೆ ಬರಬೇಕು ಹಾಗೂ ಸೇವೆ ಮಾಡುತ್ತಿರುವವರನ್ನು ದಾರಿ ತಪ್ಪಿಸದೆ ಆ ಕ್ಷೇತ್ರದಲ್ಲಿ ಮುನ್ನಡೆಯುವಂತೆ ಮಾಡಬೇಕು ಈ ನಿಟ್ಟಿನಲ್ಲಿ ಎನ್.ಎಸ್.ವಿನಯ್  ರವರ ಸಮಾಜಸೇವೆಯು ನಿಷ್ಕಲ್ಮಶದಿಂದ ಕೂಡಿದ್ದು ಯಾವುದೇ ಪ್ರತಿಫಲ ಅಪೇಕ್ಷಿಸದೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ ಹಾಗಾಗಿ ಇಂಥ ಯುವಕರನ್ನು ಉತ್ತೇಜಿಸಿ ಬೆಂಬಲಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಇವರಿಗೆ ರಾಜಕೀಯ ಶಕ್ತಿ ನೀಡಿದರೆ ಮತ್ತಷ್ಟು ಸಮಾಜ ಸೇವೆ ಮಾಡಲು ಸಾಧ್ಯವಾಗುತ್ತದೆ ಎಂದರು.

ದಕ್ಷಿಣ ಪದವೀಧರ ವೇದಿಕೆ ಅಧ್ಯಕ್ಷ ಎನ್.ಎಸ್.ವಿನಯ್ ಮಾತನಾಡಿ  ಪದವೀಧರ ನೋಂದಣಿ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬ ಪದವೀಧರರಿಗೂ ಒಂದು ಲಕ್ಷದ ಗ್ರೂಪ್ ಇನ್ಸೂರೆನ್ಸ್ ನೀಡುವುದಾಗಿ ಭರವಸೆ ನೀಡಿದ್ದವು ಅದರಂತೆ ಇಂದು ಪಿರಿಯಾಪಟ್ಟಣದಲ್ಲಿ ಸಾಂಕೇತಿಕವಾಗಿ  ಇನ್ಸೂರೆನ್ಸ್ ಬಾಂಡ್  ವಿತರಣೆಗೆ ಚಾಲನೆ ನೀಡಲಾಗುತ್ತಿದೆ.  ದಕ್ಷಿಣ ಪದವೀಧರರ ವೇದಿಕೆ ವತಿಯಿಂದ ಕಳೆದ ಸಾಲಿನಿಂದಲೇ ಪದವಿಧರರಿಗೆ ಉಚಿತ ಇನ್ಸುರೆನ್ಸ್ ಮಾಡಿಸಲಾಗುತ್ತಿದೆ. ಈ ಸೇವೆಯನ್ನು ನನ್ನ ಜೀವಿತ ಕಾಲದವರೆಗೂ ಮುಂದುವರಿಸಿಕೊಂಡು ಹೋಗುತ್ತೇನೆ ಇದು ಕೇವಲ ರಾಜಕೀಯ ಆಶ್ವಾಸನೆಯಲ್ಲ. ಈ ಕಾರ್ಯಕ್ರಮವನ್ನು ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಆರಂಭಿಸಲಾಗುತ್ತಿದ್ದು ಈ ಕ್ಷೇತ್ರದಿಂದ 1677 ಪದವಿಧರರಿಗೆ ಇನ್ಸುರೆನ್ಸ್ ಬಾಂಡ್ ವಿತರಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ 28 ಸಾವಿರಕ್ಕೂ ಹೆಚ್ಚು ಮಂದಿಗೆ ಇನ್ಶೂರನ್ಸ್ ಮಾಡಿಸಲಾಗಿದ್ದು ಈ ವರ್ಷ 39764 ಪದವಿಧರರಿಗೆ ಉಚಿತವಾಗಿ ಇನ್ಸುರೆನ್ಸ್ ಮಾಡಿಸಲಾಗಿದೆ. ಬಾಂಡ್ ಸಿಗದೆ ಇದ್ದವರು DPV 2022 ಎಂದು ಟೈಪ್ ಮಾಡಿ ತಮ್ಮ ಮೊಬೈಲ್ ಸಂಖ್ಯೆಯಿಂದ ವೆಬ್ ಸೈಟ್ ಮೂಲಕ ಡೌನ್ ಲೋಡ್ ಮಾಡಿಕೊಂಡು ಬಾಂಡ್ ಪಡೆಯಬಹುದು ಎಂದರು.

ಈ ಸಂದರ್ಭದಲ್ಲಿ ಶಿಕ್ಷಕ ಮಂಜುನಾಥ್, ಪತ್ರಕರ್ತ ಕೆ.ಪಿ.ಪವನ್ ಕುಮಾರ್,  ಮುಖಮಡರಾದ ಸೋಮು, ಮಂಜಣ್ಣ, ಮಹದೇವಸ್ವಾಮಿ, ಸಂಜಯ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next