ಮುದ್ದೇಬಿಹಾಳ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸಂಘಟಿಸಿರುವ ಯುವಜನ ಸಂಕಲ್ಪ ನಡಿಗೆ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆಯ ಎರಡನೇ ಶಿಬಿರ ಶನಿವಾರ ಗೆದ್ದಲಮರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜಯಪುರದ ಆರ್‌ಕೆಎಂ ಆಸ್ಪತ್ರೆಯ ಸಹಯೋಗದಲ್ಲಿ ನಡೆಯಿತು. 220 ರೋಗಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.
ವಿಜಯಪುರದ ಆರ್‌ಕೆಎಂ ಆಸ್ಪತ್ರೆಯ ಜನರಲ್ ಮೆಡಿಸಿನ್ ವಿಭಾಗದ ಡಾ| ಅಕ್ಷಯ್, ಅರ್ಥೋಪಿಡಿಕ್ ಸರ್ಜನ್ ಡಾ| ವಿಜಯಕುಮಾರ ಪಾಟೀಲ, ಆಸ್ಪತ್ರೆ ಸಿಬ್ಬಂದಿ ಮೋಹನ್ ರೆಡ್ಡಿ ರೋಗಿಗಳ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು.
ಹಡಲಗೇರಿ ಗ್ರಾಪಂನ ಗೆದ್ದಲಮರಿ ಗ್ರಾಮ ಪ್ರತಿನಿಧಿ ಸುವ ಸದಸ್ಯರಾದ ಶ್ರೀಕಾಂತ ಚವ್ಹಾಣ, ಮಾಳಪ್ಪ ಕನ್ನೂರ, ಟಾಕಪ್ಪ ಲಮಾಣಿ, ಪಿಡಿಒ ಶೋಭಾ ಮುದಗಲ್, ಮುದ್ದೇಬಿಹಾಳ ತಾಲೂಕು ಎಎಫ್‌ಐ ಅಧ್ಯಕ್ಷರು ಹಾಗೂ ಕರ್ಪೂರಮಠ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಶಲ್ಯತಂತ್ರದ ಪ್ರೊಫೆಸರ್ ಡಾ| ವಿಜಯಕುಮಾರ್ ನಾಯಕ, ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಕಾರ್ಯದರ್ಶಿ ಡಾ| ರೇವಣಸಿದ್ದ ಮಸೂತಿ, ಸಹ ಕಾರ್ಯದರ್ಶಿ ಡಾ| ಚಂದ್ರಶೇಖರಯ್ಯ ಶಿವಯೋಗಿಮಠ, ಎಬಿವಿಪಿ ಹಿರಿಯ ಕಾರ್ಯಕರ್ತ ಉದಯಸಿಂಗ್ ರಾಯಚೂರ, ಆಶಾ ಕಾರ್ಯಕರ್ತೆಯರು ಶಿಬಿರ ನಿರ್ವಹಿಸಿದರು.
ರಕ್ತದಾನ ಇಂದು: ಯುವಜನ ಸಂಕಲ್ಪ ನಡಿಗೆ ಪ್ರಯುಕ್ತ ಮುದ್ದೇಬಿಹಾಳ ರಕ್ತದಾನಿಗಳ ಸಂಘದ ಸಹಯೋಗದೊಂದಿಗೆ ವಿಜಯಪುರದ ಶಿವಗಿರಿ ರಕ್ತನಿಧಿ ಕೇಂದ್ರ ಹಾಗೂ ಮುದ್ದೇಬಿಹಾಳ ತಾಲೂಕಾಡಳಿತದ ಸಂಯುಕ್ತಾಶ್ರಯದಲ್ಲಿ ಆ. 7ರಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 3ರವರೆಗೆ ಮುದ್ದೇಬಿಹಾಳ ಪಟ್ಟಣದ ಕೆಬಿಎಂಪಿ ಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಶಿಬಿರದಲ್ಲಿ ಪಾಲ್ಗೊಳ್ಳುವ ರಕ್ತದಾನಿಗಳಿಗೆ ಸರ್ಟಿಫಿಕೇಟ್ ನೀಡಲಾಗುತ್ತದೆ. ಈ ಕುರಿತು ಹೆಸರು ನೋಂದಾಯಿಸಲು ದೂ. 08352-352014, ಮೊ. 8861580048, 9986303076 ಸಂಪರ್ಕಿಸಲು ಪ್ರಕಟಣೆ ಕೋರಿದೆ.