Advertisement

ಬಡವರಿಗೆ ಉಚಿತ ಅನಿಲ ಭಾಗ್ಯ

11:53 AM Feb 19, 2018 | |

ಅಫಜಲಪುರ: ಗ್ರಾಮೀಣ ಭಾಗದ ತಾಯಂದಿರು ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವುದರಿಂದ ಹೊಗೆ ನುಂಗಿ
ನೋವು ಅನುಭವಿಸುತ್ತಿದ್ದರು. ಅದನ್ನು ತಪ್ಪಿಸುವ ಸಲುವಾಗಿ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಅಡಿ ಉಚಿತ
ಗ್ಯಾಸ್‌ ಯೋಜನೆ ಅರ್ಹತಾ ಪ್ರಮಾಣ ಪತ್ರಗಳನ್ನು ಶಾಸಕ ಮಾಲೀಕಯ್ಯ ಗುತ್ತೇದಾರ ವಿತರಿಸಿದರು.

Advertisement

ತಾಲೂಕಿನ ದೇಸಾಯಿ ಕಲ್ಲೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಅರ್ಹತಾ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ಬಿಪಿಎಲ್‌ ಕಾರ್ಡುದಾರರಿಗೆ ಈ ಸೌಲಭ್ಯ ಅನ್ವಯವಾಗಲಿದೆ. ನಮ್ಮ ಸರ್ಕಾರ ಗ್ರಾಮೀಣ ಭಾಗದ ತಾಯಂದಿರ ಕಷ್ಟ ನೋಡಲಾರದೆ ಯೋಜನೆ ಜಾರಿಗೊಳಿಸಿದೆ. ಕಟ್ಟಿಗೆ ಒಲೆಯಿಂದ ಹೊಗೆ ನುಂಗಿ ಅಡುಗೆ ಮಾಡಿದ್ದು ಸಾಕು ಇನ್ನು ಮುಂದೆ ಸರ್ಕಾರದ ಅನಿಲ ಭಾಗ್ಯ ಯೋಜನೆಯಡಿ ಬರುವ ಗ್ಯಾಸ್‌ನಲ್ಲಿ ಅಡುಗೆ ತಯಾರಿಸಿ ಹೊಗೆ ಮುಕ್ತ ಅಡುಗೆ ಕೋಣೆ ನಿಮ್ಮದಾಗಲಿ ಎಂದು ಹೇಳಿದರು.

ಎಪಿಎಂಸಿ ಅಧ್ಯಕ್ಷ ಶಂಕರಲಿಂಗ ಮೇತ್ರಿ ಹಾಗೂ ಸಿದ್ದಯ್ಯ ಆಕಾಶಮಠ, ಶಿವುಕುಮಾರ ಘಾಣೂರ ಮಾತನಾಡಿ,
ಸರ್ಕಾರದ ಉಚಿತ ಅನಿಲ ಭಾಗ್ಯ ಯೋಜನೆ ಬಹಳ ಉಪಯುಕ್ತವಾಗಿದೆ. ಅದರಲ್ಲೂ ನಮ್ಮ ಗ್ರಾಮೀಣ ಭಾಗದ
ಹೆಣ್ಣು ಮಕ್ಕಳು ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವಾಗ ಹೊಗೆ ನುಂಗಿ ಸುಸ್ತಾಗುತ್ತಿದ್ದರು. ಈಗ ಇದರಿಂದ ಹೊಗೆ
ಮುಕ್ತ ಅಡುಗೆ ಕೋಣೆ ಜತೆಗೆ ಸ್ವತ್ಛತೆ ಸಹ ಇರಲಿದೆ. ಹೀಗಾಗಿ ಅನಿಲ ಭಾಗ್ಯದ ಸದುಪಯೋಗ ಪಡೆದುಕೊಳ್ಳಿ
ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ಉಷಾ ಜಮದಾರ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಪಾಶಾ ಮಣೂರ, ದೇವೇಂದ್ರ ಜಮಾದಾರ, ಸಿದ್ದು ದಿಕ್ಸಂಗಿ, ಗುರುಪಾದ ಆಲೂರ, ನಿಂಗಪ್ಪ ಬಗಲೂರ, ರೇವಣಸಿದ್ದಪ್ಪ ಪಂಚರಕಟ್ಟಿ, ಶಿವಾಜಿ ನಿಂಬರ್ಗಿ, ತಹಶೀಲ್ದಾರ ಇಸ್ಮಾಯಿ ಮುಲ್ಕಿ, ಆಹಾರ ನಿರೀಕ್ಷಕ ಇಸಾಕ್‌ ಪಾಶಾ, ನಾಗೇಶ ಬಿಲ್ವಾಡ, ಅಭಿವೃದ್ಧಿ ಅಧಿ ಕಾರಿ ಸೇರಿದಂತೆ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next