Advertisement

ಅನಾಥ ಮಕ್ಕ ಳಿಗೆ ಹುಚ್ಚೇಶ್ವರ ಶ್ರೀಗಳಿಂದ ಉಚಿತ ಶಿಕ್ಷಣ

05:24 PM May 24, 2021 | Team Udayavani |

ಶ್ರೀಶೈಲ ಕೆ. ಬಿರಾದಾರ

Advertisement

ಬಾಗಲಕೋಟೆ: ಕೊರೊನಾ ಎರಡನೇ ಅಲೆ ಎಂಬ ಮಹಾಮಾರಿ ಹಲವರನ್ನು ಹಲವು ರೀತಿಯ ಸಂಕಷ್ಟಕ್ಕೆ ದೂಡುತ್ತಿದೆ. ಇಡೀ ಕುಟುಂಬವನ್ನು ಬಲಿ ಪಡೆದು ಮಕ್ಕಳನ್ನು ಅನಾಥ ಮಾಡುತ್ತಿದೆ. ಕೊರೊನಾಗೆ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥವಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಜಿಲ್ಲೆಯ ಪ್ರತಿಷ್ಠಿತ ಮಠವೊಂದು ಮುಂದೆ ಬಂದಿದೆ.

ಹೌದು. ಹುನಗುಂದ ತಾಲೂಕಿನ ಕಮತಗಿ-ಕೋಟೆಕಲ್‌ದ ಪ್ರತಿಷ್ಠಿತ ಹುಚ್ಚೇಶ್ವರ ಸಂಸ್ಥಾನಮಠದ ಪೀಠಾಧ್ಯಕ್ಷರೂ ಹಾಗೂ ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ ಆಗಿರುವ ಶ್ರೀ ಹುಚ್ಚೇಶ್ವರ ಸ್ವಾಮೀಜಿ ಇಂತಹದೊಂದು ವಿನೂತನ ಸೇವೆಗೆ ಮುಂದಾಗಿದ್ದು, ಇಂತಹ ಸಂಕಷ್ಟಕ್ಕೊಳಗಾದ ಮಕ್ಕಳು ಜಿಲ್ಲೆಯ ಯಾವುದೇ ಭಾಗದಲ್ಲಿರಲಿ ಅವರನ್ನು ಪತ್ತೆ ಮಾಡಲು ಭಕ್ತವೃಂದಕ್ಕೆ ನಿರ್ದೇಶನ ನೀಡಿದ್ದಾರೆ.

ಸಂಪೂರ್ಣ ಉಚಿತ ಶಿಕ್ಷಣ: ಕೊರೊನಾ ದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸವನ್ನು ಶ್ರೀಮಠ ಹಾಗೂ ಹುಚ್ಚೇಶ್ವರ ವಿದ್ಯಾವರ್ಧಕ ಸಂಘ ನೋಡಿಕೊಳ್ಳಲಿದೆ. ಕೋವಿಡ್‌ ಕಾರಣದಿಂದ ಪೋಷಕರನ್ನು ಕಳೆದುಕೊಂಡು ನೋವಿನಲ್ಲಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಈ ರೀತಿ ತೊಂದರೆ ಯಲ್ಲಿರುವ ಮಕ್ಕಳ ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next