ಮುಂಬಯಿ: ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಜಿಎಸ್‌ಬಿ ಸಭಾ ನವಿಮುಂಬಯಿ ವತಿಯಿಂದ ಜೂ. 12 ಮತ್ತು 14ರಂದು ಎಲ್ಲರಿಗೂ ಉಚಿತ ಲಸಿಕೆ ಶಿಬಿರವನ್ನು ಆಯೋಜಿಸಲಾಯಿತು.
ಶಿಬಿರದಲ್ಲಿ 867 ಮಂದಿ ಕೋವಿಶೀಲ್ಡ್ ಲಸಿಕೆ ಪಡೆದರು. ಫೋರ್ಟಿಸ್ ಆಸ್ಪತ್ರೆ ವಾಶಿ ಮತ್ತು ಚೆಂಬೂರಿನ ಸುರಾನಾ ಗ್ರೂಪ್ ಆಫ್ ಹಾಸ್ಪಿಟಲ್‌ಗಳ ಸಹಕಾರದೊಂದಿಗೆ ಲಸಿಕೆ ಅಭಿಯಾನ ನಡೆಯಿತು. ಜಾತಿ, ಮತ ಮತ್ತು ಧರ್ಮವನ್ನು ಲೆಕ್ಕಿಸದೆ ಸಮಾಜಕ್ಕೆ ಉಚಿತ ವ್ಯಾಕ್ಸಿನೇಶನ್ ಮಾಡುವ ಉದ್ದೇಶದಿಂದ ಈ ಅಭಿಯಾನವನ್ನು ಆಯೋಜಿಸಲಾಯಿತು. ಈ ಉಪಕ್ರಮದ ಭಾಗವಾಗಿ ಕೊಚ್ಚಿ ಮತ್ತು ಕಾಸರಗೋಡಿನಲ್ಲಿ ಒಟ್ಟು 1,100 ಕೋವಿಡ್ ಲಸಿಕೆಗಳನ್ನು ದೀನದಲಿತರಿಗೆ ನೀಡಲಾಯಿತು. ಕೊಚ್ಚಿಯಲ್ಲಿ ಅಂದಾಜು 800 ಮತ್ತು ಕಾಸರಗೋಡಿನಲ್ಲಿ 300 ಲಸಿಕೆ ನೀಡಲಾಯಿತು.
ಅಭಿಯಾನವನ್ನು ಡಿಜಿಟಲ್ ರೀತಿಯಲ್ಲಿ ನಿರ್ವಹಿಸಲಾಗಿದ್ದು, ಜಿಎಸ್‌ಬಿ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿಗಳನ್ನು ಮಾಡಲಾಯಿತು. ಜಿಎಸ್‌ಬಿ ಸಭಾ ನವಿಮುಂಬಯಿ ಪೋರ್ಟಲ… ಅಭಿಯಾನದ ಸಮಯದಲ್ಲಿ ಗುಂಪನ್ನು ರಚಿಸಿ, ಸಾಮಾಜಿಕ ದೂರವಿಡುವ ಮಾನದಂ ಡಗಳನ್ನು ಅನುಸರಿಸಲು ಸಹಕರಿಸಲಾಯಿತು. ವ್ಯಾಕ್ಸಿನೇಶನ್ ಸಮಯದಲ್ಲಿ ಜನರಿಗೆ ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಸ್ಥಳೀಯ ನಗರ ಸೇವಕರು ತಮ್ಮ ಉದ್ಯೋಗಿಗಳಿಗೆ ಲಸಿಕೆ ಹಾಕುವ ಈ ಉಪಕ್ರ ಮದಲ್ಲಿ ಭಾಗಿಯಾಗಿದ್ದರು. ಜಿಎಸ್‌ಬಿ ಸಭಾ ನವಿಮುಂಬಯಿಯು ಅಗತ್ಯವಿರುವವರಿಗೆ ಮತ್ತು ಹಿಂದುಳಿದ ವರ್ಗದ ಜನರಿಗೆ ಹಣಕಾಸಿನ ನೆರವಿನ ದೃಷ್ಟಿಯಿಂದ ದೇಣಿಗೆ ಮೂಲಕ ಈ ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಹಾಯ ಮಾಡುವಲ್ಲೂ ಸಭಾವು ಯಶಸ್ವಿಯಾಗಿದೆ.
2020ರ ಎಪ್ರಿಲ್‌ನಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಮತ್ತು ಕೋವಿಡ್ ಪ್ರಕರಣಗಳ ಬಳಿಕ ಸಾಂಕ್ರಾಮಿಕ ರೋಗದಿಂದಾಗಿ ಬಹಳಷ್ಟು ಕುಟುಂಬಗಳು ತಮ್ಮ ದೈನಂದಿನ ಜೀವನೋಪಾಯವನ್ನು ಕಳೆದುಕೊಂಡಿವೆ. ಈ ಸಂದರ್ಭದಲ್ಲಿ ಮುಂಬಯಿ ಪ್ರದೇಶದ 800 ಬಡ ಕುಟುಂಬಗಳಿಗೆ ಮಾಸಿಕ ದಿನಸಿ ಕಿಟ್‌ಗಳನ್ನು ವಿತರಿಸಲು ಜಿಎಸ್‌ಬಿ ಸಭಾ ನವಿಮುಂಬಯಿ ಮುಂದಾಗಿದ್ದು, ಅನ್ನದಾನ ಸೇವೆಯನ್ನು ನಡೆಸಲಾಯಿತು. ಈ ಸೇವೆಯ ಭಾಗವಾಗಿ ದೈನಂದಿನ ಅಗತ್ಯ ವಸ್ತುಗಳಾದ ಅಕ್ಕಿ, ತೈಲ, ದಾಲ…, ಸೋಪ್ ಇತ್ಯಾದಿಗಳನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಿತರಿಸಲಾಯಿತು. ವಾಶಿಯಿಂದ ಮೀರಾ- ಭಾಯಂದರ್, ದಹಿಸರ್, ಡೊಂಬಿವಲಿ ಮತ್ತು ದಕ್ಷಿಣ ಮುಂಬಯಿಯ ಎಲ್ಲ ಭಾಗಗಳಲ್ಲಿ ಮಾಸಿಕ ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು.