Advertisement

ಸ್ಪರ್ಶ ಆಸ್ಪತ್ರೆಯಿಂದ ಉಚಿತ ತಪಾಸಣಾ ಶಿಬಿರ

12:15 PM Oct 16, 2017 | Team Udayavani |

ಬೆಂಗಳೂರು: ನಗರದ ಸ್ಪರ್ಶಆಸ್ಪತ್ರೆ ಸೋಮವಾರದಿಂದ(ಅ.16) ಆರುದಿನಗಳ ಕಾಲ ತುಮಕೂರು ರಸ್ತೆಯಲ್ಲಿರುವ ಆಸ್ಪತ್ರೆಯ ಆವರಣದಲ್ಲಿ 14ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಡ ಮಕ್ಕಳಿಗೆ ಮತ್ತು ವಿವಿಧ ನ್ಯೂನತೆಯಿಂದ ಬಳಲುತ್ತಿರುವ ನಿವೃತ್ತ ಶಿಕ್ಷಕರಿಗೆ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಿದೆ.

Advertisement

ಸ್ಪರ್ಶ ವಚನ ಮತ್ತು ಸ್ಪರ್ಶ ಗುರು ನಮನ  ವೈದ್ಯಕೀಯ ಸೇವಾ ಯೋಜನೆಯಡಿ ಈ ಶಿಬಿರವನ್ನು ಹಮ್ಮಿಕೊಂಡಿದೆ.ನುರಿತ ತಜ್ಞ ವೈದ್ಯರ ತಂಡ ಉಚಿತ ಶಿಬಿರಕ್ಕೆ ಆಯ್ಕೆಯಾಗಿರು 200 ಬಡ ಮಕ್ಕಳಿಗೆ ಹಾಗೂ 100ನಿವೃತ್ತ ಶಿಕ್ಷರಿಗೆ ನ್ಯೂರೋ ಸರ್ಜರಿ,ಯುರಾಲಜಿ, ಕಾರ್ಡಿಯಾ ಲಜಿ, ಕಾರ್ಡಿಯೋ ಥೋರಾಪಿಕ್‌ ಸರ್ಜರಿ, ಪ್ಲಾಸ್ಟಿಕ್‌ ಸರ್ಜರಿ ಸೇರಿದಂತೆ ಹಲವು ತಪಾಸಣೆಯನ್ನು ನಡೆಸಲಿದ್ದಾರೆ.

ಅಭ್ಯರ್ಥಿಗಳು ತಪಾಸಣೆಯ ಶಿಬಿರದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮುಂಚಿತವಾಗಿಯೆ ದೂರವಾಣಿ ಮೂಲಕ ಸಮಯ ನಿಗದಿಪಡಿಸಿ ಕೊಳ್ಳುವುದು ಕಡ್ಡಾಯವಾಗಿದ್ದು,ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌ ಸಂಖ್ಯೆ. 7022288700 ಅಥವಾ 080- 49108000 ಅನ್ನು ಸಂಪರ್ಕಿಸಬಹುದೆಂದು ಸ್ಪರ್ಶ ಆಸ್ಪತ್ರೆಯ ಪ್ರಕಣೆ ತಿಳಿಸಿದೆ.

ಸ್ಪರ್ಶ ಆಸ್ಪತ್ರೆ, ಸ್ಪರ್ಶ ವಚನ ಮತ್ತು ಸ್ಪರ್ಶ ಗುರು ನಮನ ವೈದ್ಯಕೀಯ ಸೇವಾ ಯೋಜನೆಯನ್ನು ಆರಂಭಿಸಿದ್ದು. ಈ ಕಾರ್ಯಕ್ರಕ್ಕೆ ಇದೀಗ ಎಂಟು ವರ್ಷ ಸಂದಿದೆ.ಇದುವರೆಗೂ 1700 ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಿದ್ದು ಈ ಸಮಾಜಿಕ ಸೇವೆಗೆ ದೇಶ ಅಲ್ಲದೆ ವಿದೇಶ ಹಲವು ವೈದ್ಯರು,ದಾದಿಯರು ಮತ್ತು ತಂತ್ರಜ್ಞರು ಸ್ವಯಂ ಸೇವಾ ಭಾವನೆಯಿಂದ ಕೈ ಜೋಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next