ಮುಂಬಯಿ: ದಿ ಫೋರ್ಟ್ ಆ್ಯಂಡ್ ಕೊಲಬಾ ವೆಲ್ಫೆàರ್ ಸೊಸೈಟಿಯ 65ನೇ ವಾರ್ಷಿಕ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವು ಜೂ. 23 ರಂದು ಅಪರಾಹ್ನ 3.30ರಿಂದ ಬಾಂಬೇ ಸಿಟಿ ಆ್ಯಂಬುಲೆನ್ಸ್ ಕಾರ್ಪಸ್, ಜೇಮ್‌ಶೆಟ್ ಟಾಟಾ ಆ್ಯಂಬುಲೆನ್ಸ್ ಕಾಲೇಜ್, ಮೊದಲನೇ ಮಹಡಿ, 21-ನ್ಯೂ ಮರೀನ್ ಲೈನ್ಸ್, ಬಿರ್ಲಾ ಮಾತೋಶ್ರೀ ಸಭಾಗೃಹ ಸಮೀಪದಲ್ಲಿ ನಡೆಯಿತು.
ಸ್ಥಳೀಯ ಶಾಸಕ, ಕ್ಯಾಬಿನೆಟ್ ಸಚಿವ ರಾಜ್ ಪುರೋಹಿತ್ ಇವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಪಿ. ಎಲ್. ದೇಶಪಾಂಡೆ ಮಹಾರಾಷ್ಟÅ ಕಲಾ ಅಕಾಡೆಮಿ ಮುಂಬಯಿ ಇತರ ಎಡಿಷನಲ್ ಕಲೆಕ್ಟರ್ ಪ್ರೊಡಕ್ಟ್ ಡೈರೆಕ್ಟರ್ ಸಂಜೀವ ಸೂರ್ಯಕಾಂತ್ ಪಲಾಂಡೆ ಇವರು ಅಧ್ಯಕ್ಷತೆ ವಹಿಸಿದ್ದರು. ಚೆಂಬೂರು ಕರ್ನಾಟಕ ಹೈಸ್ಕೂಲ್‌ನ ಮುಖ್ಯ ಆಡಳಿತಾಧಿಕಾರಿ ಸುರೇಶ್ ಸುವರ್ಣ ಇವರು ಪಾಲ್ಗೊಂಡಿದ್ದರು.
ಗೌರವ ಅತಿಥಿಗಳಾಗಿ ಮಂಜಲ್ ಥೀಮ್ಸ್ ಪ್ರೈವೇಟ್ ಲಿಮಿಟೆಡ್ ಇದರ ನಿರ್ದೇಶಕ ರಾಜು ಸಾವೆÉ, ನ್ಯಾಯವಾದಿ ಬಿ. ಡಿ. ಬಿರಾಜ್‌ದಾರ್, ಹೊಟೇಲ್ ಉದ್ಯಮಿ ಪ್ರಶಾಂತ್ ಕೆ. ಅಮೀನ್, ಬಿರ್ಲಾ ಮಾತೋಶ್ರೀ ಸಭಾಗೃಹದ ದಾಮೋದರ ಬಿಂದಾಲ್, ಕ್ಯಾಪ್ಟನ್ ರಮೇಶ್ ಜೆ. ಲಾಡ್, ಕನ್ನಡ ಫೋರ್ಟ್ ಜ್ಯೂನಿಯರ್ ಕಾಲೇಜಿನ ಪ್ರಾಂಶುಪಾಲ ಎಲ್. ರಾಧಾಕೃಷ್ಣನ್, ಆರ್ಯ ಸಮಾಜ ಫೋರ್ಟ್ ಇಲ್ಲಿನ ಪುರೋಹಿತ ಧರ್ಮವೀರ ಶಾಸ್ತಿÅàಜಿ, ಉದ್ಯಮಿ ಇರ್ಫಾನ್ ಇಸ್ಮಾಯಿಲ್ ಖಾನ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪರಿಸರದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹಾಗೂ ಮುಂಬಯಿ ಮಹಾನಗರ ಪಾಲಿಕೆ ಹಾಗೂ ವಿವಿಧ ರಾತ್ರಿಶಾಲೆಗಳ ಸಾವಿರಾರು ವಿದ್ಯಾರ್ಥಿಗಳಿಗೆ ಗಣ್ಯರ ಉಪಸ್ಥಿತಿಯಲ್ಲಿ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಸ್ಥೆಯ ಗೌರವ ಕಾರ್ಯದರ್ಶಿ ವೈ. ಪಿ. ಬಂಗೇರ, ಗೌರವಾಧ್ಯಕ್ಷ ಎಂ. ಎಸ್. ಕೆವೆr, ಆಡಳಿತ ನಿರ್ದೇಶಕ ಜಿ. ಎನ್. ಕುಂದರ್ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ವಿವಿಧ ಶಾಲಾ ಶಿಕ್ಷಕರು, ಶಿಕ್ಷಕೇತರ ಸಿಬಂದಿಗಳು, ತುಳು-ಕನ್ನಡಿಗರು ಪಾಲ್ಗೊಂಡಿದ್ದರು.