ಐಕ್ಯ ಸ್ಥಳ ಐಕ್ಯ ಮಂಟಪ ನೋಡಲು ಭಕ್ತರಿಗೆ ಮುಕ್ತ ಪ್ರವೇಶ ನೀಡಲು ಸೂಚಿಸಿದ್ದಾರೆ. ಇತ್ತೀಚೆಗೆ ನಡೆದ ಕೂಡಲ ಸಂಗಮ ಪ್ರಾಧಿಕಾರದ ಸಭೆಯಲ್ಲಿ ಈ ಆದೇಶ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
Advertisement
ಬಸವಣ್ಣನ ಐಕ್ಯ ಸ್ಥಳ ಐಕ್ಯ ಮಂಟಪಕ್ಕೆ ಭಕ್ತರು ತೆರಳಲು ನಿಗದಿಪಡಿಸಿದ್ದ ಪ್ರವೇಶ ದರವನ್ನು ತೆಗೆದು ಹಾಕಲು ಸೂಚಿಸಿದ್ದು, ದೊಡ್ಡವರಿಗೆ 5 ರೂ. ಹಾಗೂ ಮಕ್ಕಳಿಗೆ 2 ರೂ. ಪ್ರವೇಶ ದರ ನಿಗದಿಪಡಿಸಲಾಗಿತ್ತು.
ಸಂಗಮದಲ್ಲಿ ಇರುವ ವಸತಿ ಗೃಹಗಳ ಬಾಡಿಗೆಯನ್ನೂ ಅತಿಯಾಗಿ ಹೆಚ್ಚಿಸಿರುವುದನ್ನು ತೆಗೆದು ಹಾಕಿ, ಕಡಿಮೆ ದರದಲ್ಲಿ
ಭಕ್ತರಿಗೆ ರೂಮುಗಳು ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಸಿಎಂ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ. ಮೂರು ಹಂತದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ
ತೀರ್ಮಾನಿಸಿದ್ದು, ಮೊದಲ ಹಂತದ 133 ಕೋಟಿ ರೂ. ಹಣದಲ್ಲಿ ಈಗಾಗಲೇ 44 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೂಡಲ ಸಂಗಮದ ವ್ಯಾಪ್ತಿಯಲ್ಲಿ ಬರುವ ಪ್ರದೇಶದಲ್ಲಿ ರಸ್ತೆ, ಸೇತುವೆಗಳ ನಿರ್ಮಾಣ ಕಾರ್ಯಕ್ಕೆ ವೇಗ ನೀಡಲು ಸಿಎಂ ಸೂಚಿಸಿದ್ದಾರೆಂದು ಹೇಳಲಾಗಿದೆ.
Related Articles
ಜಾಮದಾರ್ ಅವರನ್ನು ಅಕ್ಷರ ಧಾಮ ಮಾದರಿಯಲ್ಲಿ ಕೂಡಲ ಸಂಗಮ ಅಭಿವೃದಿಟಛಿ ನೀಲ ನಕ್ಷೆ ಸಿದ್ಧಪಡಿಸಲು
ನೇಮಿಸದಂತೆ ವೀರಶೈವ ಮಹಾಸಭೆ ಮುಖ್ಯಮಂತ್ರಿಗೆ ಮನವಿ ಮಾಡಿದೆ ಎಂದು ತಿಳಿದು ಬಂದಿದೆ. ತಜ್ಞರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡುವಂತೆ ಸಚಿವ ಎಂ.ಬಿ. ಪಾಟೀಲ್ ಮಾಡಿರುವ ಮನವಿಗೆ ಮಹಾಸಭೆ ವಿರೋಧ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.
Advertisement
ಬಸವೇಶ್ವರ ಪ್ರತಿಮೆ ಸ್ಥಾಪನೆ-ವಾಗ್ಯುದ್ಧಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಜಗಜ್ಯೋತಿ ಬಸವಣ್ಣನ ಪ್ರತಿಮೆಯನ್ನು ಸ್ಥಾಪಿಸುವಂತೆ ಬಸವ ಕಲ್ಯಾಣ ಶಾಸಕ ಮಲ್ಲಿಕಾರ್ಜುನ ಖೂಬಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಸ್ಥಳದಲ್ಲಿದ್ದ ಬಸವ ಕಲ್ಯಾಣ ಕಾಂಗ್ರೆಸ್ ಅಭ್ಯರ್ಥಿ ಬಿ. ನಾರಾಯಣ ಆಕ್ಷೇಪ ವ್ಯಕ್ತಪಡಿಸಿ, “ವಿಧಾನಸೌಧದ ಆವರಣದಲ್ಲಿ ಬಸವಣ್ಣನ
ಪ್ರತಿಮೆ ಸ್ಥಾಪಿಸಲು ಬರುವುದಿಲ್ಲ ಎಂದು ಬೀದರ್‌ನಲ್ಲಿ ಹೇಳುತ್ತೀಯಾ ಇಲ್ಲಿ ನೋಡಿದರೆ, ನೀನೇ ಸಿಎಂಗೆ
ಮನವಿ ಕೊಡುತ್ತೀಯಾ’ ಎಂದು ಪ್ರಶ್ನಿಸಿದರು. “ಆಗ ಮುಖ್ಯಮಂತ್ರಿ ಕಚೇರಿಯಿಂದಲೇ ಆ ರೀತಿಯ ಪತ್ರ ಬಂದಿತ್ತು. ಹೀಗಾಗಿ ಅದನ್ನು ಬದಲಿಸಿ, ಬಸವಣ್ಣನ ಪ್ರತಿಮೆ ಸ್ಥಾಪಿಸುವಂತೆ ಮನವಿ ಮಾಡುತ್ತಿರುವುದಾಗಿ ಶಾಸಕ ಖೂಬಾ ಹೇಳಿದರು. ಈ ವೇಳೆ ಇಬ್ಬರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೋರ್ಟ್ ಆದೇಶವಿರುವುದರಿಂದ ವಿಧಾನಸೌಧದ ಆವರಣದಲ್ಲಿ ಯಾರ ಪ್ರತಿಮೆಯನ್ನೂ ಸ್ಥಾಪಿಸಲು ಅವಕಾಶವಿಲ್ಲ ಎಂದರು. “ಮಹಾತ್ಮಾ ಗಾಂಧಿ ಪ್ರತಿಮೆ ಸ್ಥಾಪಿಸಿದ್ದೀರಿ’ ಎಂದು ಖೂಬಾ ಪ್ರಶ್ನಿಸಿದರು. ಅದಕ್ಕೂ ಸಾಕಷ್ಟು ಆಕ್ಷೇಪ ವ್ಯಕ್ತವಾಗಿದೆ ಎಂದು ಹೇಳಿದರು.