Advertisement

ಭಾರತೀಯ ದೂತಾವಾಸ ಹೆಸರಲ್ಲಿ ಮೋಸ

07:30 AM Mar 06, 2018 | Team Udayavani |

ವಾಷಿಂಗ್ಟನ್‌: ಅಮೆರಿಕದಲ್ಲಿರುವ ಭಾರತೀಯ ದೂತಾವಾಸದ ಹೆಸರಿನಲ್ಲಿ ಅಲ್ಲಿರುವ ಭಾರತೀಯರನ್ನು ಮೋಸಗೊಳಿಸಿರುವ ಪ್ರಕರಣವೊಂದು ಬಯಲಾಗಿದೆ. ಪ್ರಕರಣದ ಬೆನ್ನು ಬಿದ್ದಿರುವ ದೂತಾವಾಸ ಕಚೇರಿ, ಈ ಬಗ್ಗೆ ಅಮೆರಿಕ ಸರಕಾರಕ್ಕೆ ದೂರು ನೀಡಿದ್ದು, ಪ್ರಕರಣದ ಆಂತರಿಕ ತನಿಖೆಗೆ ಆದೇಶಿಸಿದೆ. ಭಾರತೀಯರಿಗೆ ಕರೆ ಮಾಡುತ್ತಿದ್ದ ಮೋಸಗಾರರು, “”ನಿಮ್ಮ ಪಾಸ್‌ಪೋರ್ಟ್‌, ವೀಸಾ ಅರ್ಜಿ, ವಲಸೆ ಅರ್ಜಿಗಳಲ್ಲಿ ತಪ್ಪಾಗಿದ್ದು, ಇದನ್ನು ಸರಿಪಡಿಸಲು ದಂಡದ ರೂಪದಲ್ಲಿ ಹಣ ಕಟ್ಟಬೇಕು. ಇಲ್ಲವಾದರೆ, ಅಮೆರಿಕದಿಂದ ಶೀಘ್ರವೇ ನಿಮ್ಮನ್ನು ಗಡಿಪಾರು ಮಾಡಲಾಗುಗುತ್ತದೆ ಅಥವಾ ಜೈಲು ಶಿಕ್ಷೆಯಾಗುತ್ತದೆ” ಎಂದು ಹೆದರಿಸಿ, ಹಣ ವಸೂಲಿ ಮಾಡಿದ್ದಾರೆ. ಅಮೆರಿಕಾ ವೀಸಾ ನಿರೀಕ್ಷೆಯಲ್ಲಿದ್ದ ಅರ್ಜಿದಾರರಿಗೂ ಇಂಥ ಕರೆಗಳು ಬಂದಿವೆ.  ಈ ಬಗ್ಗೆ ಕೆಲವರು ದೂತಾವಾಸ ಕಚೇರಿಯಲ್ಲಿ ವಿಚಾರಣೆ ನಡೆಸಿದಾಗ ಈ ಮೋಸದ ಜಾಲ ಬಯಲಾಗಿದೆ. 

Advertisement

ಏತನ್ಮಧ್ಯೆ, ಅರ್ಜಿಯ  ದೋಷಗಳ ಬಗ್ಗೆ  ತಮ್ಮ ಸಿಬ್ಬಂದಿ ಕರೆ ಮಾಡುವುದಿಲ್ಲ.  ಇ-ಮೇಲ್‌ ಕಳುಹಿಸಲಾಗುತ್ತದೆ ಎಂದು ದೂತಾವಾಸ ಸ್ಪಷ್ಟಪಡಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next