Advertisement
ಬಾಕಿ ಇರಿಸಿದ್ದ ಹಣವನ್ನು ಪಾವತಿಸಲು ತಿಳಿಸಿದಾಗ ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ. ಕಾಲೇಜಿನ ಒಂದು ಕೋಣೆಯಲ್ಲಿ ಬೀಗ ಹಾಕಿ ಇಟ್ಟಿದ್ದ ಹಾಗೂ ಕಟ್ಟಡದ ಇತರ ಕೋಣೆಗಳಲ್ಲಿದ್ದ ಸುಮಾರು 125 ಬೆಂಚು, 150 ಡೆಸ್ಕ್ ಹಾಗೂ 50 ಕುರ್ಚಿಗಳನ್ನು 2023ರ ಜು. 22ರಂದು ಬೇರೆ ಕಡೆಗೆ ಸಾಗಾಟ ಮಾಡಿದ್ದಾರೆ.
ಮಾತ್ರವಲ್ಲದೆ ಜು. 27ರಂದು ಮಹೇಶ್ ಫೌಂಡೇಶನ್ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ, ಗೂಂಡಾಗಳ ಜತೆ ಬಂದು ಸೆಕ್ಯುರಿಟಿ ಗಾರ್ಡ್‌ಗೆ ಹಲ್ಲೆ ಮಾಡಿ ಬೀಗ ಒಡೆದು, ಟ್ಯಾಕ್ಸ್ ರಶೀದಿ, ಪೀಠೊಪಕರಣಗಳ ದಾಖಲೆಯನ್ನು ಕಳ್ಳತನ ಮಾಡಿದ್ದಾರೆ ಎಂದು ಮೋಹನ್ ರೈ ಅವರು ದೂರಿನಲ್ಲಿ ತಿಳಿಸಿದ್ದಾರೆ.