Advertisement

ಟ್ರೇಡಿಂಗ್‌ ವ್ಯವಹಾರ ನೆಪದಲ್ಲಿ ವಂಚನೆ 

08:45 PM Apr 19, 2023 | Team Udayavani |

ಉಡುಪಿ: ಆನ್‌ಲೈನ್‌ ವ್ಯವಹಾರದ ಬಗ್ಗೆ ಟೆಲಿಗ್ರಾಂನಲ್ಲಿ ಹಣ ಡೆಪಾಸಿಟ್‌ ಮಾಡುವಂತೆ ತಿಳಿಸಿ ವಂಚಿಸಿದ ಘಟನೆ ನಡೆದಿದೆ.

Advertisement

ಹೊಟೇಲ್‌ ಕೆಲಸ ಮಾಡಿಕೊಂಡಿರುವ ಸಂದೀಪ್‌ ಕುಮಾರ್‌ ಅವರಿಗೆ ಎ.4ರಂದು ಟೆಲಿಗ್ರಾಮ್‌ ಆ್ಯಪ್‌ ನಲ್ಲಿ ಟ್ರೇಡಿಂಗ್‌ ವ್ಯವಹಾರದ ಬಗ್ಗೆ ಅನಾಮಧೇಯ ಲಿಂಕ್‌ ಬಂದಿದ್ದು, ಅದಕ್ಕೆ ಹಣವನ್ನು ಡಿಪಾಸಿಟ್‌ ಮಾಡುವಂತೆ ತಿಳಿಸಲಾಗಿತ್ತು. ಆ ಸಮಯದಲ್ಲಿ ಅವರು ಹಾಕಿದ ಹಣ ಹಿಂತಿರುಗಿ ಬಂದಿತ್ತು. ಇದನ್ನು ನಂಬಿದ ಅವರು ತನ್ನ ಕರ್ಣಾಟಕ ಬ್ಯಾಂಕ್‌ ರಾಜರಾಜೇಶ್ವರಿ ನಗರ ಶಾಖೆಯ ಎಸ್‌.ಬಿ.ಖಾತೆ ಯಿಂದ ಹಂತಹಂತವಾಗಿ ಒಟ್ಟು 4,20,341ರೂ.ಗಳನ್ನು ಆರೋಪಿ ಸೂಚಿಸಿದ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿದ್ದರು. ಯಾರೋ ಅಪರಿಚಿತ ವ್ಯಕ್ತಿಗಳು ಟೆಲಿಗ್ರಾಮ್‌ ಆ್ಯಪ್‌ನಲ್ಲಿ ಟ್ರೇಂಡಿಂಗ್‌ ವ್ಯವಹಾರ ಎಂದು ನಂಬಿಸಿ ಅವರಿಗೆ ವಂಚಿಸಿದ್ದಾರೆ. ಸೆನ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next