Advertisement
ಆರೋಪಿ ಇತ್ತೀಚೆಗೆ ಹೋಟೆಲ್ ಉದ್ಯಮಿ ಶಾಜಿ ಕೃಷ್ಣನ್ ಎಂಬವರಿಗೆ ರಾಷ್ಟ್ರೀಕೃತ ಬ್ಯಾಂಕ್‌ವೊಂದರಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ, ಅವರಿಂದ ದಾಖಲೆಗಳನ್ನು ಪಡೆದುಕೊಂಡಿದ್ದ. ಬಳಿಕ ಕೃಷ್ಣನ್ ಅವರನ್ನು ಬ್ಯಾಂಕ್‌ಗೂ ಕರೆದುಕೊಂಡು ಹೋಗಿ ಅರ್ಜಿಗಳಿಗೆ ಸಹಿ ಮಾಡಿಸಿದ್ದಾನೆ. ಆದರೆ, ಆರೋಪಿ 2.5 ಕೋಟಿ ರೂ. ಸಾಲ ಪಡೆದುಕೊಂಡಿದ್ದ. ಅದನ್ನು ಸರಿಯಾದ ಸಮಯಕ್ಕೆ ಕಟ್ಟದೆ ಸುಸ್ತಿದಾರನಾಗಿದ್ದ. ಈ ಮಧ್ಯೆ ಕಾರ್ಯನಿಮಿತ್ತ ಕೃಷ್ಣನ್ ಬ್ಯಾಂಕ್‌ಗೆ ಹೋದಾಗ ಈ ವಿಚಾರ ಬೆಳಕಿಗೆ ಬಂದಿತ್ತು.
Related Articles
Advertisement
ಜಿಎಸ್ಟಿ ಕಮಿಷನರ್ ಹೆಸರಲ್ಲಿ ವಂಚನೆ: ಆರೋಪಿಯು ಟ್ರಾವೆಲ್ಸ್ ಕಂಪನಿ ಮಾಲೀ ಕರೊಬ್ಬರಿಗೆ ಜಿಎಸ್‌ಟಿ ಕಮಿಷನರ್ ಹೆಸರಲ್ಲಿ ಮೋಸ ಮಾಡಿದ್ದಾನೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಟ್ರಾವೆಲ್ಸ್ ಕಂಪನಿ ಮಾಲೀಕರು ಕೋಟ್ಯಂತರ ರೂ. ಜಿಎಸ್‌ಟಿ ಕಟ್ಟಬೇಕಿತ್ತು. ಈ ವಿಚಾರ ತಿಳಿದು ಪರಿಚಯಿಸಿಕೊಂಡಿದ್ದ ಯೂಸೂಫ್, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆಯುಕ್ತರು ತನಗೆ ಪರಿಚಿತರೆಂದು ಸುಳ್ಳು ಹೇಳಿದ್ದ. ನಂತರ ಟ್ರಾವೆಲ್ಸ್ ಕಂಪನಿ ಮಾಲೀಕರನ್ನು ಜಿಎಸ್‌ಟಿ ಕಚೇರಿಗೆ ಕರೆದೊಯ್ದಿದ್ದ. ಬಳಿಕ, ಜಿಎಸ್ಟಿ ಆಯುಕ್ತರೊಂದಿಗೆ ಮಾತನಾಡಿದ್ದೇನೆ. ಜಿಎಸ್ ಟಿಯಲ್ಲಿ ಶೇ.50 ಕಡಿಮೆ ಮಾಡಲು ಒಪ್ಪಿದ್ದಾರೆ. ಅವರಿಗೆ ಕಮಿಷನ್ ರೂಪದಲ್ಲಿ ಮುಂಗಡ 15 ಲಕ್ಷ ರೂ. ಕೊಡಬೇ ಕೆಂದು ಹೇಳಿ ಹಣ ಪಡೆದು ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.
ನಿವೃತ್ತ ಎಸ್‌ಪಿ ಎದುರಲ್ಲೇ ವಂಚನೆ: ನಂದಿನಿಲೇಔಟ್‌ನ ಉದ್ಯಮಿ ಶಿವಾನಂದಮೂರ್ತಿ ಎಂಬುವರಿಗೆ ಹಳೆ ಕಾರು ಕೊಡಿಸುವುದಾಗಿ ನಂಬಿಸಿ ನಿವೃತ್ತ ಎಸ್‌ಪಿಯೊಬ್ಬರ ಸಮ್ಮುಖದಲ್ಲೇ ಮುಂಗಡವಾಗಿ 5 ಲಕ್ಷ ರೂ. ಪಡೆದು, ಕಾರು ಕೊಡಿಸದೆ ಯೂಸೂಫ್ ವಂಚಿಸಿದ್ದಾನೆ. ಅಲ್ಲದೆ, ಹಣ ವಾಪಸ್ ಕೇಳಿದ ಶಿವಾನಂದಮೂರ್ತಿಗೆ ಆರೋಪಿ ಕೊಲೆ ಬೆದರಿಕೆ ಹಾಕಿದ್ದ.
ಈ ಸಂಬಂಧ ಶಿವಾನಂದಮೂರ್ತಿ ಆರೋಪಿ ವಿರುದ್ಧ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಹೆಸರಿನಲ್ಲಿ ಮೋಸ: ಆರೋಪಿ ಯೂಸೂಫ್ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೆಸರು ಹೇಳಿಕೊಂಡು ಕೆಲವರಿಂದ ಹಣ ಪಡೆದು ವಂಚಿಸಿದ್ದಾನೆ ಎಂಬುದು ಗೊತ್ತಾಗಿದೆ.
ಬಿಜೆಪಿ ಹೈಕಮಾಂಡ್ ನಾಯಕರು ತನಗೆ ಪರಿಚಯವಿದ್ದು, ರಾಜಕೀಯವಾಗಿ ಕೆಲಸ ಮಾಡಿಸುವುದಾಗಿ ಹಲವರಿಂದ ಹಣ ಪಡೆದು ವಂಚಿಸಿದ್ದಾನೆ ಎಂದು ಹೇಳಲಾಗಿದೆ. ಈ ಸಂಬಂಧ ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.