ಭಾರತೀನಗರ: ಯಾವುದೇ ಅಪಪ್ರಚಾರಕ್ಕೆ ಕಿವಿಕೊಡದೆ ಜಿಲ್ಲೆಯ ಅಭಿವೃದ್ಧಿಗೆ ನನಗೆ ಮತನೀಡಿ ಎಂದು ಮೈತ್ರಿ ಅಭ್ಯರ್ಥಿ ನಿಖಿಲ್‌ಕುಮಾರಸ್ವಾಮಿ ಹೇಳಿದರು. ಇಲ್ಲಿನ ಭಾರತೀನಗರದ ಅಭಿಮಾನಿಗಳೊಂದಿಗೆ ಮತಪ್ರಚಾರ ಮಾಡಿ ಮಾತನಾಡಿದರು.
ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಹಾಗೂ ನನ್ನ ಕುಟುಂಬದ ಸೇರಿದಂತೆ ಜೆಡಿಎಸ್ ಪಕ್ಷದ ವಿರುದ್ಧ ಅಪ್ರಚಾರ ನಡೆಯುತ್ತಿದೆ. ಇದಕ್ಕಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವಂತ ವ್ಯಕ್ತಿಯನ್ನು ಆಯ್ಕೆಮಾಡಬೇಕೆಂದು ಮೈತ್ರಿ ಅಭ್ಯರ್ಥಿ ನಿಖಿಲ್ ಹೇಳಿದರು.
ನನ್ನ ತಾತ ಇಳಿವಯಸ್ಸಿನಲ್ಲೂ ಹೋರಾಟದ ಹಾದಿಯಲ್ಲಿ ಸಾಗುತ್ತಿದ್ದಾರೆ. ಜೊತೆಗೆ ನಮ್ಮ ತಂದೆ ಜಿಲ್ಲೆಯ ಅಭಿವೃದ್ಧಿಗಾಗಿ ಮತ್ತು ಕಷ್ಟಸುಖಗಳಿಗಾಗಿ ಸ್ಪಂದಿಸಿದ್ದಾರೆ. ರೈತಪರ, ಜನಪರ ಕಾಳಜಿ ಇರುವ ನಮ್ಮ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ಕೋರಿದರು.
ಚುನಾವಣೆಯಲ್ಲಿ ಮೈತ್ರಿ ಧರ್ಮದ ಪಾಲನೆಗೆ ನಿರ್ಧಾರವಾಗಿದೆ. ಕಾಂಗ್ರೆಸ್‌ನ ಎಲ್ಲಾ ಮುಖಂಡರು ಜವಾಬ್ದಾರಿಯುವತವಾಗಿ ಚುನಾವಣೆ ಪರ ಪ್ರಚಾರ ಮಾಡಲ್ಲಿದ್ದಾರೆ. ಎಲ್ಲಾ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಮಂಡ್ಯಜಿಲ್ಲೆಯ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸುತ್ತಿದ್ದರೂ ಪ್ರಸ್ತುತ ರಾಜಕೀಯ ಹೋರಾಟ ನೋಡಿ ಮನಸ್ಸಿಗೆ ನೋವಾಗುತ್ತಿದೆ. ಮಾಧ್ಯಮಗಳು ಒಬ್ಬರ ಪರವಾಗಿ ಬಿಂಬಿಸುತ್ತಿವೆ. ಇದಕ್ಕೆ ಯಾರೂ ಕಿವಿಕೊಡದೆ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲು ಮನವಿ ಮಾಡಿದರು.
ನನ್ನ ಜೀವನದಲ್ಲಿ ಏನೇ ಮಾಡಿದರೂ ಶ್ರಮದಿಂದ ಕೆಲಸ ನಿರ್ವಹಿಸಿ ನನ್ನ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳುತ್ತೇನೆ. ಇದಕ್ಕೆ ಅವಕಾಶ ಕಲ್ಪಿಸಿಕೊಡಿ, ನಮ್ಮ ಪಕ್ಷದ ಏಳಿಗೆಯನ್ನು ಸಹಿಸಲಾಗದ ಕೆಲವರು ಹಿಂದಿಕ್ಕಲು ನೋಡುತ್ತಿದ್ದಾರೆ. ಮತದಾರರು ಚಿಂತಿಸಿ ಮತಚಲಾಯಿಸಬೇಕೆಂದು ಕೋರಿದರು.
ಇದೇ ವೇಳೆ ಜೆಡಿಎಸ್ ಮುಖಂಡ ಸಂತೋಷ್ ತಮ್ಮಣ್ಣ, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಕುಮಾರ್‌ರಾಜು, ಕೆ.ಟಿ.ಸುರೇಶ್, ವೆಂಕಟೇಶ್ ಸೇರಿದಂತೆ ಇತರರು ಹಾಜರಿದ್ದರು.