Advertisement

ಉಡುಪಿ: ವೈದ್ಯರ ಹೆಸರಿನಲ್ಲಿ ಮಹಿಳೆಗೆ 6,91,000 ರೂ. ವಂಚನೆ

10:37 PM Dec 01, 2022 | Team Udayavani |

ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಮಹಿಳೆಗೆ ಮೋಸ ಮಾಡಿದ ಘಟನೆ ನಡೆದಿದೆ.

Advertisement

ಸೆಪ್ಟಂಬರ್‌ ತಿಂಗಳಿನಲ್ಲಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ವ್ಯಕ್ತಿ ತಾನು ಸ್ಕಾಟ್ಲೆಂಡ್‌ನ‌ಲ್ಲಿ ಡಾಕ್ಟರ್‌ ಎಂಬುವುದಾಗಿ ಪರಿಚಯಿಸಿಕೊಂಡು, ಅನಂತರ ವಾಟ್ಸಾಪ್‌ ಮೂಲಕ ಚಾಟಿಂಗ್‌ ನಡೆಸಿ ಸ್ನೇಹಿತರಾಗಿದ್ದರು. ನವೆಂಬರ್‌ ಮೊದಲನೇ ವಾರದಲ್ಲಿ ಆತನು ಕೊರಿಯರ್‌ ಪಾರ್ಸೆಲ್‌ ಮೂಲಕ ಗಿಫ್ಟ್ ಕಳುಹಿಸುವುದಾಗಿ ಮಹಿಳೆಯನ್ನು ನಂಬಿಸಿದ್ದು, ಬಳಿಕ ಹೊಸದಿಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೊರಿಯರ್‌ ಕಚೇರಿಯಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿ ಪೌಂಡ್‌ ಹಣವನ್ನು ಭಾರತೀಯ ರೂಪಾಯಿಗೆ ಬದಲಾಯಿಸಲು ಹಣ ಪಾವತಿಸಬೇಕು ಎಂದು ತಿಳಿಸಿದ್ದಾನೆ.

ಅದನ್ನು ನಂಬಿದ ಮಹಿಳೆ ಆರೋಪಿಗಳು ಸೂಚಿಸಿದ ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ 6,91,000 ರೂ. ಪಾವತಿಸಿದ್ದಾರೆ. ಆದರೆ ಪಾರ್ಸೆಲ್‌ ನೀಡದೆ, ಹಣವನ್ನೂ ಹಿಂದಿರುಗಿಸದೆ ಆರೋಪಿಗಳು ಮೋಸ ಎಸಗಿದ್ದಾರೆ ಎಂದು ಮಹಿಳೆ ಸೆನ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next