Advertisement

Kollur ಮರದ ವ್ಯವಹಾರದಲ್ಲಿ ವಂಚನೆ; ತನಿಖೆಗೆ ಕೋರ್ಟ್‌ ಆದೇಶ

12:59 AM Feb 01, 2024 | Team Udayavani |

ಕೊಲ್ಲೂರು: ಸ್ಥಿರಾಸ್ತಿಯ ಮರಗಳನ್ನು ಕಡಿದು ಕರಾರಿನ ಪ್ರಕಾರ ನೀಡಬೇಕಾದ 3,28,250 ರೂ. ಮೊತ್ತವನ್ನು ನೀಡುವುದಾಗಿ ನಂಬಿಸಿ, ಈವರೆಗೆ ನೀಡದೆ ವಂಚನೆ ಮಾಡಿರುವುದಾಗಿ ನ್ಯಾಯಾಲಯಕ್ಕೆ ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ದೂರುದಾರ ಮಹಮ್ಮದ್‌ ಆಶ್ರಫ್‌ ಸುರತ್ಕಲ್‌ ಅವರು ಮರದ ವ್ಯವಹಾರಸ್ಥರಾಗಿದ್ದರು.

ಆರೋಪಿತ ಎನ್‌.ಎಂ. ಸಾಹಿರ್‌ ಹಾಗೂ ಇತರರು ಮಹಮ್ಮದ್‌ ಅಶ್ರಫ್‌ ಅವರನ್ನು ಸಂಪರ್ಕಿಸಿ ಮುದೂರು ಗ್ರಾಮದ ಅವರ ಸುಪರ್ದಿಯಲ್ಲಿರುವ ಜಾಗದ ಮರ ಕಡಿಯುವ ಬಗ್ಗೆ ಮಾತುಕತೆ ನಡೆಸಿ 2 ಲಕ್ಷ ರೂ. ನಗದು ಮುಂಗಡವಾಗಿ ನೀಡಿದ್ದಾರೆ. ಆ ಬಳಿಕ ದೂರುದಾರರು ಮರ ಕಡಿಯಲು ಸಂಬಂಧಪಟ್ಟ ಇಲಾಖೆಯಲ್ಲಿ ಸಂಪರ್ಕಿಸಿ 30 ಲಕ್ಷ ರೂ. ಹಣವನ್ನು ವ್ಯಯಿಸಿದ್ದಾರೆ.

ದೂರುದಾರರು ತಮ್ಮ ಜಾಗಕ್ಕೆ ಹೋದಾಗ ಅದಾಗಲೇ ಆರೋಪಿಗಳು ಮರಗಳನ್ನು ಕಡಿದುಕೊಂಡು ಹೋಗಿದ್ದು ಕಂಡುಬಂದಿತ್ತು. ಆರೋಪಿ ಹಾಗೂ ಇತರರು ದೂರುದಾರರ ಗಮನಕ್ಕೆ ತಾರದೆ ಬೇರೆಯವರಿಗೆ ಮರಗಳನ್ನು ಮಾರಾಟ ಮಾಡಿ ನಂಬಿಕೆಗೆ ದ್ರೋಹ ಎಸಗಿರುವುದಾಗಿ ಆರೋಪಿ ಸಾಹಿರ್‌ ಹಾಗೂ ಇತರ ಹಕ್ಕುದಾರರು ಕರಾರನ್ನು ರದ್ದುಪಡಿಸಲು ಮಹಮ್ಮದ್‌ ಅಶ್ರಫ್‌ ಅವರಿಗೆ 15 ಲಕ್ಷ ರೂ. ಹಣ ಕೊಡಲು ಒಪ್ಪಿಕೊಂಡು ಕರಾರು ರದ್ದತಿ ಪತ್ರ ಮಾಡಿಕೊಂಡಿದ್ದು, ಆ ಪ್ರಕಾರ ಅಪಾದಿತರನ್ನು ಹೊರತುಪಡಿಸಿ, ಮಿಕ್ಕುಳಿದ ಹಕ್ಕುದಾರರಿಗೆ ಹಣ ನೀಡಿರುತ್ತಾರೆ. ನನ್ನ ಪಾಲಿಗೆ ಬರಬೇಕಾದ 3,28,250 ರೂ. ಹಣವನ್ನು ನೀಡದೆ ವಂಚಿಸಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next