Advertisement
ಗುರುರಾಜ್ ಅವರಿಗೆ ಮುಂಬಯಿ ಮೂಲದ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿಯೊಂದರಿಂದ ಟೂರ್ ಪ್ಯಾಕೇಜ್ ಹೆಸರಲ್ಲಿ ಕರೆ ಬಂದಿದ್ದು, ಮಣಿಪಾಲದ ಖಾಸಗಿ ಹೊಟೇಲ್‌ನಲ್ಲಿ ನಡೆಯುವ ಕಂಪೆನಿಯ ಮೀಟಿಂಗ್‌ನಲ್ಲಿ ಭಾಗವಹಿಸುವಂತೆ ಮೇಲಿಂದ ಮೇಲೆ ಕರೆ ಮಾಡಿ ತಿಳಿಸಲಾಗಿತ್ತು. ಆದರೆ ಇವರು ಆರಂಭದಲ್ಲಿ ಪ್ರಸ್ತಾವವನ್ನು ಒಪ್ಪಿಕೊಂಡಿರಲಿಲ್ಲ. ಅನಂತರ ಬೇರೆ ಕೆಲಸದ ಮೇರೆಗೆ ಮಣಿಪಾಲಕ್ಕೆ ತೆರಳಿದಾಗ ಮೀಟಿಂಗ್‌ನಲ್ಲಿ ಭಾಗವಹಿಸಿದ್ದರು.
ಆರಂಭದಲ್ಲಿ ಒಂದೆರಡು ದಿನ ಪ್ರಥ್ವಿರಾಜ್ ಎನ್ನುವಾತ ಮೊಬೈಲ್ ಕರೆಗೆ ಸಿಕ್ಕಿದ್ದು, ಅನಂತರ ಯಾವುದೇ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಟೂರ್ ಪ್ಯಾಕೇಜ್ ಹೆಸರಲ್ಲಿ ವಂಚನೆ ಮಾಡುವ ಜಾಲ ಇದಾಗಿದ್ದು, ನನ್ನಂತೆ 50-60 ಮಂದಿ ಮೋಸ ಹೋಗಿರುವ ಸಾಧ್ಯತೆ ಇದೆ. ಈ ಜಾಲವನ್ನು ಪತ್ತೆ ಹಚ್ಚಿ ನ್ಯಾಯ ಒದಗಿಸಬೇಕು ಎಂದು ಗುರುರಾಜ್ ಅವರು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.