Advertisement

ಆನ್‌ಲೈನ್‌ ಸಾಲದ ಹೆಸರಲ್ಲಿ ವಂಚನೆ

10:48 PM Mar 29, 2023 | Team Udayavani |

ಉಡುಪಿ: ಆನ್‌ಲೈನ್‌ ಜಾಹೀರಾತು ವೀಕ್ಷಿಸಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ವಂಚಿಸಿರುವ ಘಟನೆ ನಡೆದಿದೆ.

Advertisement

ಕೀರ್ತಿರಾಜ್‌ ತಮ್ಮ ಅಗತ್ಯ ಕೆಲಸಕ್ಕಾಗಿ ಫೇಸ್‌ಬುಕ್‌ನಲ್ಲಿ ಕಂಡ ರಿಲಯನ್ಸ್‌ ಸಾಲ ಮಂಜೂರು ಜಾಹೀರಾತಿನಲ್ಲಿ ಸಾಲ ಕೋರಿ ಅರ್ಜಿ ಸಲ್ಲಿಸಿದ್ದರು. ಮಾ. 27 ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ ರಿಲಯನ್ಸ್‌ ಸಂಸ್ಥೆ ಸಿಬಂದಿ ಎಂದು ನಂಬಿಸಿ ಲೀಗಲ್‌ ಚಾರ್ಜ್‌ಗೆ 2,599 ರೂ., ಹಾಗೂ ಟಿಡಿಎಸ್‌, ಜಿಎಸ್‌ಟಿ ಶುಲ್ಕವೆಂದು ಒಟ್ಟು 92,449 ರೂ. ವನ್ನು ಆನ್‌ಲೈನ್‌ನಲ್ಲಿ ಪಡೆದುಕೊಂಡಿದ್ದ. ಅನಂತರ ಸಾಲವೂ ನೀಡದೇ ಹಣವನ್ನು ಹಿಂದೆ ಕೊಡದೇ ಮೋಸ ಮಾಡಿದ್ದಾರೆ. ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next