Advertisement

ಕಟೀಲು ದೇವಿ ಹೆಸರಲ್ಲಿ ಮೋಸ: ವೃದ್ಧ ದಂಪತಿಗೆ 14 ಸಾ.ರೂ. ವಂಚನೆ

09:53 AM Oct 27, 2019 | keerthan |

ತೆಕ್ಕಟ್ಟೆ: ಇಲ್ಲಿನ ಮಾಲಾಡಿ ಎಂಬಲ್ಲಿನ ಮನೆಗೆ ಬಂದ ವ್ಯಾಪಾರಿಗಳು ನಾಲ್ಕು ಬೆಡ್‌ ಶೀಟ್‌ ನೀಡಿ ವೃದ್ಧ ದಂಪತಿಯಿಂದ 14 ಸಾ. ರೂ. ಪಡೆದು ವಂಚಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Advertisement

ನಿವೃತ್ತ ಸಂಸ್ಕೃತ ಶಿಕ್ಷಕ ಮಾಲಾಡಿ ಗುರುರಾಜ್‌ ಭಟ್‌ (89) ಹಾಗೂ ಶಾಂತಮ್ಮ (82) ದಂಪತಿಯ ಮನೆಗೆ ಅ.17ರಂದು ಆಗಮಿಸಿದ ಬೆಡ್‌ಶೀಟ್‌ ವ್ಯಾಪಾರಿಗಳು ಈ ಕೃತ್ಯ ಎಸಗಿದ್ದಾರೆ.

ಬೆಡ್‌ ಶೀಟ್‌ ಖರೀದಿಸಲು ಒತ್ತಾಯಿಸಿದಾಗ ಶಾಂತಮ್ಮ “ನಮಗೆ ಬೆಡ್‌ಶೀಟ್‌ ಬೇಡ’ ಎಂದರೂ ಸುಮ್ಮನಾಗದ ವ್ಯಾಪಾರಿಗಳು, ಗುರುರಾಜ್‌ ಭಟ್ಟರಲ್ಲಿ ವ್ಯಾಪಾರ ಕುದುರಿಸಿದ್ದಾರೆ. ವ್ಯಾಪಾರಿಗಳು ಕಟೀಲು ದೇವಿಯ ಹೆಸರು
ಹೇಳಿ ಗುರುರಾಜ ಭಟ್ಟರನ್ನು ವಂಚಿಸಿದ್ದಾರೆ.

ದೇವಸ್ಥಾನದ ಅಭಿವೃದ್ಧಿಗಾಗಿ ನಾವು ಈ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ. ನಾಲ್ಕು ಬೆಡ್‌ಶೀಟ್‌ಗೆ 18 ಸಾ. ರೂ. ಆಗುತ್ತದೆ. ನೀವು 14 ಸಾ. ರೂ. ನೀಡಿ ಎಂದಿದ್ದರು. ಇವರ ಮಾತನ್ನು ನಂಬಿ ಭಟ್ಟರು 14 ಸಾ. ರೂ. ನೀಡಿದ್ದಾರೆ. ಈ ವ್ಯವಹಾರ ನಡೆಸುವಾಗ ಶಾಂತಮ್ಮರನ್ನು ಕುಡಿಯಲು ಬಿಸಿ ನೀರು ಬೇಕೆಂದು ಒಳಗೆ ಕಳುಹಿಸಿದ್ದರು! ದಂಪತಿಯ ಮಕ್ಕಳು ದೂರ ದೂರಿನಲ್ಲಿ ಉದ್ಯೋಗದಲ್ಲಿದ್ದಾರೆ.

Advertisement

ಆಮ್ನಿಯಲ್ಲಿ ಬಂದಿದ್ದರು
ಮೂವರಿದ್ದ ಈ ವಂಚಕರ ತಂಡ ಬಿಳಿ ಆಮ್ನಿಯೊಂದರಲ್ಲಿ ಬಂದಿದೆ. ಅದರಲ್ಲಿ ಓರ್ವ ಸುಮಾರು 60 ವರ್ಷ ಮೇಲ್ಪಟ್ಟವನಾಗಿದ್ದು, ಮತ್ತಿಬ್ಬರು ಯುವಕರಾಗಿದ್ದರು ಎಂದು ತಿಳಿದು ಬಂದಿದೆ.

ಗ್ರಾ. ಪಂ.ಅಧ್ಯಕ್ಷರಿಂದ ಬಹಿರಂಗ
ದಂಪತಿ ತಾವು ಕಟೀಲು ದೇವಿಗಾಗಿ ಹಣ ನೀಡಿದ್ದೇವೆ ಎಂದು ಭಾವಿಸಿ ಯಾರಲ್ಲೂ ಈ ಬಗ್ಗೆ ಹೇಳ ಕೊಂಡಿರಲಿಲ್ಲ. ಆದರೆ ವಿಷಯ ತಿಳಿದ ತೆಕ್ಕಟ್ಟೆ ಗ್ರಾ.ಪಂ. ಅಧ್ಯಕ್ಷ ಶೇಖರ್‌ ಕಾಂಚನ್‌ ಅವರು ಅ.25ರಂದು ದಂಪತಿಯ ಮನೆಗೆತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಕೋಟ ಎಸ್‌ ಐ ನಿತ್ಯಾನಂದ ಗೌಡ ನೇತೃತ್ವದ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next