Advertisement

ಪೊಲೀಸ್‌ ನೇಮಕಾತಿ ಪರೀಕ್ಷೆಯಲ್ಲಿ ವಂಚನೆ: ಐವರ ಬಂಧನ

07:43 PM Sep 27, 2021 | Team Udayavani |

ಥಾಣೆ: ಮಹಾರಾಷ್ಟ್ರ ಪೊಲೀಸ್‌ ನೇಮಕಾತಿ ಪರೀಕ್ಷೆ ಸಂದರ್ಭ ವಂಚನೆ ಮತ್ತು ಇತರ ದುಷ್ಕೃತ್ಯಗಳಲ್ಲಿ ತೊಡಗಿದ್ದ ಆರೋಪದ ಮೇಲೆ ಐವರನ್ನು ಥಾಣೆ ನಗರದಿಂದ ಪೊಲೀಸರು ಬಂಧಿಸಿದ್ದಾರೆ.

Advertisement

ಪೊಲೀಸ್‌ ಇಲಾಖೆ ಚಾಲಕರ ನೇಮಕಾತಿಗಾಗಿ ರವಿವಾರ ಥಾಣೆ ಮತ್ತು ನೆರೆಯ ಪಾಲ್ಘರ್‌ ಜಿಲ್ಲೆಯಲ್ಲಿ ಲಿಖೀತ ಪರೀಕ್ಷೆ ನಡೆಯಿತು.

ಥಾಣೆ ಪೊಲೀಸ್‌ ಆಯುಕ್ತಾಲಯ ವ್ಯಾಪ್ತಿಯಲ್ಲಿ ಸುಮಾರು 18,000 ಉದ್ಯೋಗ ಆಕಾಂಕ್ಷಿಗಳು ಪರೀಕ್ಷೆಗೆ ಹಾಜರಾಗಿದ್ದರು. ನಗರದ ಬಾಲ್ಕಮ್‌ ಪ್ರದೇಶದ ಪರೀಕ್ಷೆ ಕೇಂದ್ರದಲ್ಲಿ ಐವರು ಪರೀಕ್ಷೆಯ ವೇಳೆ ವಂಚನೆ ಮತ್ತು ಇತರ ದುಷ್ಕೃತ್ಯಗಳಲ್ಲಿ ಭಾಗಿಯಾಗಿರುವುದು ಕಂಡುಬಂದವು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕಪುರಬಾವಾಡಿ ಪೊಲೀಸ್‌ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next