ಬೆಂಗಳೂರು: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರ ಸಂಬಂಧಿ ಎಂದು ಹೇಳಿಕೊಂಡು ಸರ್ಕಾರಿ ಕೆಲಸ ಕೊಡಿಸುವುದಾಗಿ ಹಲವರಿಂದ ಹಣ ಪಡೆದು ವಂಚಿಸಿರುವ ಆರೋಪದಡಿ ಇಬ್ಬರು ಮಹಿಳೆಯರ ವಿರುದ್ಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹೆಸರುಘಟ್ಟದ ಸಮೀಪದ ಮತ್ತೂರ್ ನಿವಾಸಿ ಕೆ.ನಾಗರಾಜು ಎಂಬವವರು ನೀಡಿದ ದೂರಿನ ಮೇರೆಗೆ ಸೋಲದೇವನಳ್ಳಿ ನಿವಾಸಿ ಪಲ್ಲವಿ (30) ಮತ್ತು ಇಂದ್ರಾಣಿ(45) ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಉದ್ಯೋಗಾಂಕ್ಷಿಗಳನ್ನು ಸಂಪರ್ಕಿಸುತ್ತಿದ್ದ ಆರೋಪಿ ಪಲ್ಲವಿ, ತಾನೂ ಮಾಜಿ ಸಚಿವರ ಸಂಬಂಧಿ ಎಂದು ಪರಿಚಯಿಸಿಕೊಳ್ಳುತ್ತಿದ್ದರು.
ಸರ್ಕಾರಿ ಕೆಲಸ ಹಾಗೂ ಸರ್ಕಾರದಿಂದ ಸಾಲ ಕೊಡಿಸುವುದಾಗಿ ಆಮಿಷವೊಡ್ಡುತ್ತಿದ್ದರು. ಹೀಗಾಗಿ ನನಗೆ ಇರಲು ಮನೆಯಿಲ್ಲ ಎಂದು ಹೇಳಿ ಕೊಂಡು ಅಮಾಯಕರ ಮನೆಯಲ್ಲಿ ಆಶ್ರಯ ಪಡೆದು ಬಳಿಕ ಸರ್ಕಾರಿ ಕೆಲಸ ಹಾಗೂ ಸರ್ಕಾರದಿಂದ ಸಾಲ ಕೊಡಿಸುವುದಾಗಿ ನಂಬಿಸುತ್ತಿದ್ದಳು.
ಸರ್ಕಾರಿ ಅಧಿಕಾರಿ ಗಳಿಗೆ ಲಂಚ ಕೊಡಬೇಕು ಎಂದು ಹಣಕ್ಕೆ ಬೇಡಿಕೆ ಇರಿಸುತ್ತಿದ್ದಳು. ಒಂದು ವೇಳೆ ಕೊಡಲು ನಿರಾಕರಿಸಿದರೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿ ದ್ದರು ಎಂದು ಪೊಲೀಸರು ಹೇಳಿದರು. ಆರೋಪಿ ಪಲ್ಲವಿ, ವಿನೋದ್ ಕುಮಾರ್ ಜತೆ ವಿವಾಹವಾಗಿದ್ದು, ವಿಚ್ಛೇದನ ಪಡೆಯದೆ ಹತ್ತಕ್ಕೂ ಹೆಚ್ಚು ಯುವಕರನ್ನು ವಿವಾಹವಾಗಿ ವಂಚಿಸಿದ್ದಾಳೆ.
ಅಂತೆಯೆ ತಮ್ಮ ಮನೆಯಲ್ಲಿ ಉಳಿದುಕೊಂಡು 4 ಲಕ್ಷ ರೂ. ಪಡೆದು ವಾಪಾಸ್ ಕೇಳಿದ್ದಕ್ಕೆ ಸುಳ್ಳು ದೂರು ನೀಡಿದ್ದಾಳೆ. ನನ್ನ ಪತ್ನಿಯಿಂದ ಒಡವೆ ಪಡೆದು ಹಿಂದಿರುಗಿಸಿಲ್ಲ. ಅಲ್ಲದೆ, ಇಂದ್ರಾಣಿ, ನನ್ನ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಲು ಕೆಲವರನ್ನು ಪ್ರೇರೇಪಿಸಿದ್ದಾಳೆ ಎಂದು ನಾಗರಾಜ್ ದೂರಿನಲ್ಲಿ ಉಲ್ಲೇಖೀಸಿದ್ದಾರೆ
.