Advertisement

ಮದುವೆ ಆಗುವುದಾಗಿ ನಂಬಿಸಿ ವಂಚನೆ: ಶಿಕ್ಷೆ

11:42 PM Oct 11, 2019 | mahesh |

ಮಂಗಳೂರು: ಮದುವೆ ಆಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿ ವಂಚಿಸಿದ ಪ್ರಕರಣದಲ್ಲಿ ಶಕ್ತಿನಗರದ ಕುಂಟಲ್ಪಾಡಿಯ ಜಿ. ಗಣೇಶ್‌ ಕುಮಾರ್‌ (34) ಎಂಬಾತನಿಗೆ 7 ವರ್ಷ ಸಜೆ ವಿಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಆರ್‌. ಪಲ್ಲವಿ ತೀರ್ಪು ನೀಡಿದ್ದಾರೆ.

Advertisement

ಶಿಕ್ಷೆಯ ವಿವರ: ಆರೋಪಿಗೆ ಐಪಿಸಿ 376(ಅತ್ಯಾಚಾರ) ಅನ್ವಯ 7 ವರ್ಷ ಸಜೆ ಮತ್ತು 5,000 ರೂ. ದಂಡ, ಐಪಿಸಿ 417 (ವಂಚನೆ) ಅನ್ವಯ 6 ತಿಂಗಳು ಸಜೆ, ಐಪಿಸಿ 506 (ಬೆದರಿಕೆ) ಪ್ರಕಾರ 6 ತಿಂಗಳು ಸಜೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ 6 ತಿಂಗಳು ಸಜೆ ಮತ್ತು 2,500 ರೂ. ದಂಡ ವಿಧಿಸಲಾ ಗಿದೆ. ದಂಡ ನೀಡದಿದ್ದಲ್ಲಿ 1 ತಿಂಗಳು ಸಾದಾ ಸಜೆ ಅನುಭವಿಸಬೇಕು.

ಪ್ರಕರಣದ ವಿವರ: ಗಣೇಶ್‌ ಕುಮಾರ್‌ ನಗರದಲ್ಲಿ ಕಂಟ್ರಾಕುrದಾರನಾಗಿದ್ದು, ಆತನಿಗೆ ಮನೆ ಕೆಲಸ ಮಾಡುತ್ತಿದ್ದ ಹಾಸನ ಮೂಲದ ಯುವತಿ ಜತೆ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ 2010ರಿಂದ 2013ರ ವರೆಗೆ ಇಬ್ಬರೂ ಅನ್ಯೋನ್ಯವಾಗಿದ್ದರು. ಯುವಕ ಮದುವೆಯಾಗುವುದಾಗಿ ನಂಬಿಸಿ ನಗರದ ಕೆಲವು ಲಾಡ್ಜ್ ಗಳಿಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದ. ಬಳಿಕ ಈಕೆ ಮದುವೆಯಾಗಲು ಒತ್ತಾಯಿಸಿದ್ದಳು. ಆಗ ಗಣೇಶ್‌ ಜಾತಿಯ ಪ್ರಸ್ತಾಪ ಮಾಡಿ ಜಾತಿ ನಿಂದನೆ ಮಾಡಿದ್ದ. ಬಳಿಕ ಯುವತಿ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಳು.

ರಾಜಿ ಸಂಧಾನಕ್ಕೆ ಪ್ರಯತ್ನ: ಪೊಲೀಸ್‌ ಠಾಣೆಗೆ ದೂರು ನೀಡಿದಾಗ ಹೆೆದರಿದ ಗಣೇಶ್‌ ಕೂಡಲೇ ರಾಜಿ ಸಂಧಾನಕ್ಕೆ ಮುಂದಾಗಿ ಮದುವೆಯಾಗುವ ಭರವಸೆ ಕೊಟ್ಟಿದ್ದ. ಇದಕ್ಕಾಗಿ ಸಿದ್ಧತೆ ಕೂಡ ಮಾಡಲಾಗಿತ್ತು. ಆದರೆ ಮದುವೆ ದಿನ ಆತ ನಾಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ 2014 ಮಾ. 19ರಂದು ಯುವತಿ ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಗಣೇಶ್‌ ವಿರುದ್ಧ ಅತ್ಯಾಚಾರ, ಮೋಸ, ದೌರ್ಜನ್ಯ ದೂರು ದಾಖಲಿಸಿದ್ದಳು.

ನಗರದ ಕೇಂದ್ರ ವಿಭಾಗದ ಎಸಿಪಿ ಪೊಲೀಸ್‌ ಆಯುಕ್ತ ತಿಲಕ್‌ಚಂದ್ರ ಪ್ರಾರಂಭಿಕ ತನಿಖೆ ನಡೆಸಿ, ಬಳಿಕ ಬಂದ ಎಸಿಪಿ ಸದಾನಂದ ವರ್ಣೇಕರ್‌ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಆರೋಪಿ ತನಗೆ ಲೈಂಗಿಕ ಸಂಪರ್ಕ ಮಾಡುವ ಸಾಮರ್ಥ್ಯ ಇಲ್ಲ ಎಂದು ವಾದಿಸಿದ್ದರೂ ಸಾಬೀತು ಮಾಡಲಾಗಿಲ್ಲ. ಆತ ತನ್ನ ಸ್ನೇಹಿತರಲ್ಲೂ “ಈಕೆ ನನ್ನನ್ನು ಮದುವೆಯಾಗುವವಳು’ ಎಂದು ಪರಿಚಯಿಸಿದ್ದು, ಈ ಸ್ನೇಹಿತರು ಮತ್ತು ಲಾಡ್ಜ್ನ ಮ್ಯಾನೇಜರ್‌ ಸಹಿತ ಒಟ್ಟು 28 ಸಾಕ್ಷಿಗಳನ್ನಾಗಿ ಪರಿಗಣಿಸಲಾಗಿತ್ತು. ಈ ಪೈಕಿ 18 ಮಂದಿ ಸಾಕ್ಷಿ ನುಡಿದಿದ್ದಾರೆ. ಸರಕಾರದ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಿ. ಶೇಖರ್‌ ಶೆಟ್ಟಿ ವಾದಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next