Advertisement

ಮೈಸೂರು: ನಕಲಿ ಡಾಕ್ಟರೇಟ್ ಪದವಿ ಪ್ರದಾನ! ಡಿಸಿಪಿ ನೇತೃತ್ವದಲ್ಲಿ ದಾಳಿ, ಆಯೋಜಕರು ಪರಾರಿ

04:46 PM Sep 26, 2020 | sudhir |

ಮೈಸೂರು: ನಗರದಲ್ಲಿ ನಕಲಿ ವಿಶ್ವವಿದ್ಯಾಲಯ ಹೆಸರಿನಲ್ಲಿ ಡಾಕ್ಟರೇಟ್‌ ಪದವಿ ಪ್ರದಾನ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಪದವಿ ಪ್ರದಾನ ಕಾರ್ಯಕ್ರಮದ ವೇಳೆ ಡಿಸಿಪಿ ಪ್ರಕಾಶ್‌ ಗೌಡ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

Advertisement

ಈ ಒಂದು ನಕಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹರಿಹರ ಶಾಸಕ ರಾಮಪ್ಪ ಭಾಗಿಯಾಗಿದ್ದರು ಆದರೆ ಕಾರ್ಯಕ್ರಮದ ಮೊದಲೇ ಡಿಸಿಪಿ ಪ್ರಕಾಶ್‌ ಗೌಡ ಅವರು ಶಾಸಕರಲ್ಲಿ ನಕಲಿ ಕಾರ್ಯಕ್ರಮದ ಕುರಿತು ಮನವರಿಕೆ ಮಾಡಿದ್ದಾರೆ.

ಪೊಲೀಸರ ಪರಿಶೀಲನೆ ವೇಳೆ ಕಾರ್ಯಕ್ರಮ ಆಯೋಜಕರಲ್ಲಿ ಕೆಲವರು ಪರಾರಿಯಾಗಿದ್ದು, ಮೂರಕ್ಕೂ ಹೆಚ್ಚು ಆಯೋಜಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ವಿಪಕ್ಷಗಳ ವಿರೋಧದ ನಡುವೆ ವಿಧಾನಸಭೆಯಲ್ಲಿ ಭೂಸುಧಾರಣಾ ತಿದ್ದುಪಡಿ ವಿಧೇಯಕ ಅಂಗೀಕಾರ

Advertisement

ಇಂಟರ್‌ನ್ಯಾಷನಲ್‌ ಗ್ಲೋಬಲ್ ಪೀಸ್ ವಿ.ವಿ. ಹೆಸರಲ್ಲಿ ನಕಲಿ ಡಾಕ್ಟರೇಟ್ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ೧೫೦ಕ್ಕೂ ಹೆಚ್ಚು ಜನರಿಂದ ಹಣ ಪಡೆದು ಡಾಕ್ಟರೇಟ್ ಪದವಿ ನೀಡಲು ಕಾರ್ಯಕ್ರಮ ಆಯೋಜಕರು ಮುಂದಾಗಿದ್ದರು ಎನ್ನಲಾಗಿದೆ.

ಕಾರ್ಯಕ್ರಮದ ಪ್ರಶಸ್ತಿ ಪತ್ರ, ಫಲಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ಪ್ರಕಾಶ್‌ ಗೌಡ ತಿಳಿಸಿದ್ದಾರೆ.

ಇದನ್ನೂ ಓದಿ:ಪಿಎಂ ಮೋದಿ ಬಹುರಾಷ್ಟ್ರೀಯ ಕಂಪನಿಗಳ ಮಧ್ಯವರ್ತಿ: ಮಾಜಿ ಶಾಸಕ‌ ಶ್ರೀರಾಮರೆಡ್ಡಿ ವಾಗ್ದಾಳಿ

Advertisement

Udayavani is now on Telegram. Click here to join our channel and stay updated with the latest news.

Next