Advertisement
ಕೆಲವು ಸಮಯದ ಹಿಂದೆ, ಕುದ್ದುಪದವು ನಿವಾಸಿ ಶ್ರೀಧರ್ ರೈ ಅವರ ದಿನಸಿ ಅಂಗಡಿಗೆ ಗಿರಾಕಿಯ ಸೋಗಿನಲ್ಲಿ ಶಾಫಿ ಬಂದು ಪಶು ಆಹಾರ ಖರೀದಿಸಿದ್ದ. ಅಂಗಡಿ ಮಾಲಕ ಶ್ರೀಧರ್ ರೈ ಅವರು ಚಿಲ್ಲರೆ ನೀಡಲೆಂದು ತಿರುಗಿದಾಗ ಅವರನ್ನು ವಂಚಿಸಿ ಸುಮಾರು 33 ಸಾವಿರ ದೋಚಿ, ಪರಾರಿಯಾಗಿದ್ದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತನ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ, ಮಂಗಳೂರಿನಲ್ಲಿ ಒಂದು ಹಾಗೂ ಬೆಳ್ತಂಗಡಿಯಲ್ಲಿ 6 ಕಳ್ಳತನ ಪ್ರಕರಣಗಳು ದಾಖಲಾಗಿರುವ ಬಗ್ಗೆ ತನಿಖೆಯ ವೇಳೆ ತಿಳಿದುಬಂದಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. Advertisement
ವಂಚಿಸಿ, ನಗದು ದೋಚಿದ ಪ್ರಕರಣ: ಓರ್ವ ಆರೋಪಿ ಬಂಧನ
12:03 AM Aug 16, 2020 | mahesh |
Advertisement
Udayavani is now on Telegram. Click here to join our channel and stay updated with the latest news.