ಯಾದಗಿರಿ: ನಿಮಗೆ ಲಕ್ಕಿ ಡಿಫ್ ನಲ್ಲಿ ಕಾರ್ ,ಬೈಕ್ ಸಿಗುತ್ತೆ ಅಂತೇಳಿ ಹಳ್ಳಿಗರನ್ನು ನಂಬಿಸಿದ ಖದೀಮರ ತಂಡವೊಂದು ಅವರಿಂದ ಹಣ ಪಡೆದು ಬಳಿಕ ಎಸ್ಕೇಪ್ ಆಗಿದ್ದಾರೆ.
ಕೆಎಸ್ ಎಸ್ ಎಂಟಪ್ರೈಸಸ್ ಹೆಸರಿನಲ್ಲಿ ಯಾದಗಿರಿ ಲಕ್ಷ್ಮಿ ನಗರದಲ್ಲಿ ವಂಚಕರ ಗ್ಯಾಂಗ್ ಕಳೆದ ಜನವರಿ ತಿಂಗಳಲ್ಲಿ ಕಂಪನಿ ಆರಂಭಿಸಿತ್ತು ಎನ್ನಲಾಗಿದೆ.
ಕಾರ್,ಬೈಕ್, ಚಿನ್ನಾಭರಣ ಮೊದಲಾದ ಗೃಹ ಬಳಿಕೆ ವಸ್ತುಗಳನ್ನು ಬಂಪರ್ ಲಕ್ಕಿ ಸ್ಕೀಮ್ ನಲ್ಲಿ ಲಾಟರಿ ಮೂಲಕ ನೀಡುತ್ತಿವೆ ಅಂತ ಜನರಿಗೆ ನಂಬಿಸಲಾಗಿದೆ.
ಇದನ್ನೂ ಓದಿ : ನಮಗೆ ರಾಜಕೀಯ ಮಾಡುವುದಕ್ಕೆ ಬರುವುದಿಲ್ಲ, ಜನರ ಸೇವೆಗಾಗಿ ಇಲ್ಲಿ ಇದ್ದೇವೆ : ಕೇಜ್ರಿವಾಲ್
ಕೂಲಿ ಕಾರ್ಮಿಕರು ಮತ್ತು ಗ್ರಾಮೀಣ ಭಾಗದವರನ್ನು ಟಾರ್ಗೆಟ್ ಮಾಡಿದ ಖದೀಮರು ಯಾದಗಿರಿ ನಗರ ಸೇರಿದಂತೆ ಯರಗೋಳ, ಬಂದಳ್ಳಿ,ಹತ್ತಿಕುಣಿ ಸೇರಿ ಸುತ್ತಮುತ್ತಲಿನ ಹಳ್ಳಿಗಳಯಲ್ಲಿ 2000 ಅಧಿಕ ಜನರಿಂದ 8 ಕಂತುಗಳಲ್ಲಿ ಪ್ರತಿ ಕಂತು ಹಣ 399 ವಸೂಲಿ ಮಾಡಿ ,ಪ್ರತಿಯೊಬ್ಬರಿಂದಲ್ಲೂ 3000 ಗಳಂತೆ ಸುಮಾರು 60 ಲಕ್ಷಕ್ಕೂ ಅಧಿಕ ಹಣ ಪಡೆದುಕೊಂಡು ಜಾಗಖಾಲಿ ಮಾಡಿದ್ದಾರೆ. ಸ್ಕೀಮ್ ಮೋಸದಿಂದ ತಡವಾಗಿ ಎಚ್ಚರಗೊಂಡ ಜನ ನ್ಯಾಯಕ್ಕಾಗಿ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.