Advertisement
ದೂರುದಾರ ವ್ಯಕ್ತಿಯೋರ್ವರ ವಾಟ್ಸ್ ಆ್ಯಪ್ ನಂಬರ್ಗೆ ಲೈಲಾ ಎನ್ನುವವರು ಚಾಟ್ ಮಾಡಿ ಆನ್ಲೈನ್ನಲ್ಲಿ ಪಾರ್ಟ್ ಟೈಮ್ ಉದ್ಯೋಗವಿದೆ ಎಂದು ಹೇಳಿದ್ದಳು. ಅನಂತರ ಯೂ ಟ್ಯೂಬ್ ಚಾನೆಲ್ನ ಲಿಂಕ್ ಕಳುಹಿಸಿ ಅದನ್ನು ಸಬ್ ಸ್ಕ್ರೈಬ್ ಮಾಡಿದರೆ 50 ರೂ. ಮತ್ತು ಇನ್ನೊಂದು ಯೂಟ್ಯೂಬ್ ಚಾನೆಲ್ ಲಿಂಕ್ ಕಳುಹಿಸಿ ಅದನ್ನು ಸಬ್ಸ್ಕೈಬ್ ಮಾಡಿದರೆ 50 ರೂ. ದೊರೆಯುತ್ತದೆ ಎಂದು ತಿಳಿಸಿದ್ದಳು. ಅನಂತರ ಮೂರನೇ ಟಾಸ್ಕ್ ಎಂದು ಟೆಲಿಗ್ರಾಂ ಆ್ಯಪ್ನಲ್ಲಿ ರಿಸೆಪ್ಶನಿಸ್ಟ್ ಸಾರಾ ಜಾರ್ಜ್ನನ್ನು ಸಂಪರ್ಕಿಸುವಂತೆ ತಿಳಿಸಿದ್ದಳು. ಇದನ್ನು ನಂಬಿದ ದೂರುದಾರ ವ್ಯಕ್ತಿ ಟೆಲಿಗ್ರಾಂ ಆ್ಯಪ್ನಲ್ಲಿ ರಿಸೆಪ್ಶನಿಸ್ಟ್ ಅನ್ನು ಸಂಪರ್ಕಿಸಿ ಸಬ್ ಸ್ಕ್ರೈಬ್ ಮಾಡಿದ ಅನಂತರ ಅವರ ಬ್ಯಾಂಕ್ ಖಾತೆ ನಂಬರ್ ಕೇಳಿ 150 ರೂ.ಗಳನ್ನು ಪೇಟಿಎಂ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದಾಳೆ. ಇದಾದ ಅನಂತರ ದೂರುದಾರ ವ್ಯಕ್ತಿಯನ್ನು ಟೆಲಿಗ್ರಾಂ ಪಾರ್ಟ್ ಟೈಮ್ ಜಾಬ್ ಗ್ರೂಪ್ಗೆ ಸೇರಿಸಿದ್ದಾಳೆ. ಇದರಲ್ಲಿ ದಿನಕ್ಕೆ 25 ಟಾಸ್ಕ್ ಇದ್ದು ಅದರಲ್ಲಿ 20 ಟಾಸ್ಕ್ ಅನ್ಪೇಯ್ಡ ಮತ್ತು 5 ಪೇಯ್ಡ ಟಾಸ್ಕ್ ಇರುತ್ತದೆ. ಪ್ರತೀ ಅನ್ಪೇಯ್ಡ ಟಾಸ್ಕ್ ನಲ್ಲಿ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಕೊಟ್ಟು ಅದನ್ನು ಲಿಂಕ್ ಮಾಡುವಂತೆ ದೂರುದಾರರಿಗೆ ಹೇಳಿದ್ದಾಳೆ. ಹೀಗೆ 5 ಪೇಯ್ಡ್ ಟಾಸ್ಕ್ ನಲ್ಲಿ ಹಂತಹಂತವಾಗಿ ಆಮಿಷ ತೋರಿಸಿ 1.62 ಲ.ರೂ. ವಂಚನೆ ಮಾಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. Advertisement
ಪಾರ್ಟ್ ಟೈಂ ಉದ್ಯೋಗದ ಆಮಿಷ: ವ್ಯಕ್ತಿಗೆ 1.62 ಲ.ರೂ. ವಂಚನೆ
10:52 PM Apr 18, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.