Advertisement

Fake Email ಐಡಿಯಿಂದ ಸಂದೇಶ ಕಳುಹಿಸಿ ವಂಚನೆ

08:11 PM Aug 07, 2023 | Team Udayavani |

ಮಂಗಳೂರು: ವ್ಯಕ್ತಿಯೋರ್ವರಿಗೆ ಅವರ ಪರಿಚಯದ ವ್ಯಕ್ತಿಯ ನಕಲಿ ಇ-ಮೇಲ್‌ ಐಡಿಯ ಮೂಲಕ ಸಂದೇಶ ಕಳುಹಿಸಿ ಹಣ ಪಡೆದು ವಂಚಿಸಲಾಗಿದೆ.

Advertisement

ದೂರುದಾರರ ಇ-ಮೇಲ್‌ ಐಡಿಗೆ ಅವರ ಪರಿಚಯದ ವ್ಯಕ್ತಿಯೋರ್ವರ ಇ-ಮೇಲ್‌ ಐಡಿಯಿಂದ ಮೆಸೇಜ್‌ ಬಂದಿತ್ತು. ಅದರಲ್ಲಿ ಪರಿಚಯದ ವ್ಯಕ್ತಿಯ ಮಗಳ 25ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಣೆ ಬಗ್ಗೆ ಸಂದೇಶವಿತ್ತು. ಅದಕ್ಕೆ ದೂರುದಾರರು ರಿಪ್ಲೈ  ಮಾಡಿದ್ದರು. ಆ ಬಳಿಕ ವಾರ್ಷಿಕೋತ್ಸವದ ಬಗ್ಗೆ ಗಿಫ್ಟ್ ನೀಡಲು ಹಣದ ಅವಶ್ಯಕತೆ ಇದೆ ಎಂಬುದಾಗಿ ಸಂದೇಶ ಬಂದಿತ್ತು. ಇದನ್ನು ನಂಬಿದ ದೂರುದಾರರು ಪರಿಚಯದ ವ್ಯಕ್ತಿಯೇ ಸಂದೇಶ ಕಳುಹಿಸಿರಬಹುದು ಎಂದು ನಂಬಿ ಆ.4ರಂದು ರಾತ್ರಿ 16,970 ರೂ. ಮತ್ತು 27,000 ರೂ. ಕಳುಹಿಸಿದ್ದರು. ಅನಂತರವೂ ಅದೇ ಇ-ಮೇಲ್‌ ಐಡಿಯಿಂದ ಇನ್ನಷ್ಟು ಹಣದ ಅವಶ್ಯಕತೆ ಇದೆ ಎಂಬ ಸಂದೇಶ ಬಂದಿತ್ತು.

ದೂರುದಾರರು ಮತ್ತೆ 72,000 ರೂ.ಗಳನ್ನು ಕಳುಹಿಸಿದರು. ಅನಂತರ ಮತ್ತಷ್ಟು ಹಣದ ಅಗತ್ಯವಿರುವುದಾಗಿ ಸಂದೇಶ ಬಂತು. ಈ ಬಗ್ಗೆ ಸಂದೇಹ ಉಂಟಾಗಿ ದೂರುದಾರರು ಪರಿಚಯದ ವ್ಯಕ್ತಿಯನ್ನು ಖುದ್ದಾಗಿ ಭೇಟಿ ಮಾಡಿ ವಿಚಾರಿಸಿದರು. ಆಗ ಯಾರೋ ಅವರ ಪರಿಚಯದ ವ್ಯಕ್ತಿಯ ಇ-ಮೇಲ್‌ ಐಡಿಯನ್ನು ನಕಲಿ ಮಾಡಿ ಸಂದೇಶ ಕಳುಹಿಸಿ ಒಟ್ಟು 1,15,970 ರೂ. ವರ್ಗಾಯಿಸಿಕೊಂಡು ಮೋಸ ಮಾಡಿರುವುದು ಗೊತ್ತಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next