Advertisement

Fraud Case: ಲಾಭದ ಆಸೆಗೆ ಹಣ ಹೂಡಿಕೆ ಮಾಡಿ 22.88 ಲಕ್ಷ ಕಳೆದುಕೊಂಡ ವ್ಯಕ್ತಿ

05:36 PM Dec 15, 2023 | Team Udayavani |

ಚಿಕ್ಕಬಳ್ಳಾಪುರ: ಹಣ ಹೂಡಿಕೆ ಮಾಡಿದರೆ ಅದರ ಮೇಲೆ ಹೆಚ್ಚು ಪ್ರತಿಶತ ಲಾಭ ಕೊಡುವುದಾಗಿ ಹೇಳಿ ನಂಬಿಸಿ ಚಿಕ್ಕಬಳ್ಳಾಪುರ ವ್ಯಕ್ತಿಗೆ ಅನ್‌ಲೈನ್ ಕಳ್ಳರು ಬರೋಬ್ಬರಿ 22.88 ಲಕ್ಷ ರು, ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಹಿಸಿಕೊಂಡು ಭಾರೀ ವಂಚನೆ ಮಾಡಿರುವ ಘಟನೆ ನಡೆದಿದೆ.

Advertisement

ಸದ್ಯ 22.88 ಲಕ್ಷ ರು, ಹಣ ಕಳೆದುಕೊಂಡಿರುವ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಹುನೇಗಲ್ಲು ಗ್ರಾಮದ ನಿವಾಸಿ ಶಿವರಾಜ್ ಕುಮಾರ್ ಬಿನ್ ಲೇಟ್ ವೆಂಕಟಪ್ಪ (33) ಎಂಬುವರು ಸದ್ಯ ಲಕ್ಷಾಂತರ ರು, ಹಣ ಕಳೆದುಕೊಂಡಿರುವ ಬಗ್ಗೆ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿ ವಂಚನೆ ಮಾಡಿದ ವ್ಯಕ್ತಿಗಳಿಂದ ಹಣ ಕೊಡಿಸುವಂತೆ ಅವಲತ್ತುಕೊಂಡಿದ್ದಾರೆ.

ಆಗಿದ್ದೇನು:
ಶಿವರಾಜ್ ಕುಮಾರ್ ಇಂಡಿಯನ್ ಬ್ಯಾಂಕ್ ಖಾತೆ ಹೊಂದಿದ್ದು ತನ್ನ ಮೊಬೈಲ್ ನಂಬರ್ ನ್ನು ಖಾತೆಗೆ ಲಿಂಕ್ ಮಾಡಿಕೊಂಡು ಯುಪಿಐ ಮೂಲಕ ತನ್ನ ದೈನಂದಿನ ಹಣಕಾಸಿನ ವ್ಯವಹಾರಗಳನ್ನು ಮಾಡುತ್ತಿದ್ದರು. ಡಿ.11ರಂದು ಟೆಲಿಗ್ರಾಂನಲ್ಲಿ ಅಪರಿಚಿತ ವ್ಯಕ್ತಿ ಅಮೇಜಿಂಗ್ ಟಾಸ್ಕ್ ಎಂಬ ಕಾನ್ಸೆಪ್ಟ್ ನಲ್ಲಿ ನಿಮ್ಮ ಮೊತ್ತದ ಮೇಲೆ 30% ಪ್ರತಿಶತ ಪ್ರಾಪಿಟ್ ನೀಡುವುದಾಗಿ ಹೇಳಿ ಹಣ ಹೂಡಿಕೆ ಮಾಡುವಂತೆ ಹೇಳಿದ್ದಾನೆ. ಇಷ್ಟಕ್ಕೆ ಹಿಂದೆ ಮುಂದೆ ಯೋಚಿಸದೇ ಶಿವರಾಜ್ ಕುಮಾರ್ ಹೂಡಿಕೆ ಮೇಲೆ ಹೆಚ್ಚು ಲಾಭ ಸಿಗುತ್ತದೆಯೆಂಬ ಹೇಳಿ ಆರಂಭದಲ್ಲಿ 1,000, 2000, 3,000 ಹಣ ಹೂಡಿಕೆ ಮಾಡಿ ಅದರಿಂದ ಅಪರಿಚಿತ ವ್ಯಕ್ತಿ ಹೇಳಿದಂತೆ ಹೆಚ್ಚಿನ ಪ್ರಮಾಣದಲ್ಲಿ ಲಾಭ ಗಳಿಸಿದ್ದಾರೆ. ಇದೇ ರೀತಿ ಶಿವರಾಜ್ ಕುಮಾರ್‌ನನ್ನು ವಂಚಿಸಿದ ಆನ್‌ಲೈನ್ ಕಳ್ಳರು ಹೆಚ್ಚು ಲಾಭದ ಆಸೆ ತೋರಿಸಿ ಅವರಿಂದ ಲಕ್ಷಾಂತರ ರು, ಹಣ ಹೂಡಿಕೆ ಮಾಡಿ ಬಳಿಕ ಲಾಭ ಹಾಗೂ ಅಸಲು ಹಣ ಕೊಡದೇ ಒಟ್ಟು 22.88 ಲಕ್ಷ ರು, ಹಣವನ್ನು ಸೈಬರ್ ಕಳ್ಳರು ಶಿವರಾಜ್ ಕುಮಾರ್‌ಗೆ ವಂಚಿಸಿರುವುದಾಗಿ ಆತನ ಸೈಬರ್ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Sabarimala; ವ್ಯವಸ್ಥೆ ಕಲ್ಪಿಸುವಲ್ಲಿ ಸರಕಾರ ಸಂಪೂರ್ಣ ವಿಫಲ: ಕಾಂಗ್ರೆಸ್ ನಾಯಕ ಚೆನ್ನಿತ್ತಲ

Advertisement

Udayavani is now on Telegram. Click here to join our channel and stay updated with the latest news.

Next