Advertisement

Fraud Case ಜಾಹೀರಾತು ಏಜೆನ್ಸಿ ನೀಡುವುದಾಗಿ ವಂಚನೆ

10:50 PM Jun 22, 2024 | Team Udayavani |

ಮಂಗಳೂರು: ಜಾಹೀರಾತು ಏಜೆನ್ಸಿ ನೀಡುವುದಾಗಿ ಹೇಳಿ 50,000 ರೂ. ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

Advertisement

ದೂರುದಾರರು ಗೂಗಲ್‌ನಲ್ಲಿ ಜಾಹೀರಾತು ಕಂಪೆನಿ ಏಜೆನ್ಸಿ ಬಗ್ಗೆ ಆಗಾಗ್ಗೆ ಪರಿಶೀಲನೆ ನಡೆಸುತ್ತಿದ್ದರು. ಅವರಿಗೆ ಜೂ.12ರಂದು ಕರೆ ಮಾಡಿದ ಓರ್ವ ಅಪರಿಚಿತ ವ್ಯಕ್ತಿ ಹಿಂದಿಯಲ್ಲಿ ಮಾತನಾಡಿ, ಹರಿಯಾಣದಿಂದ ಮಾತನಾಡುತ್ತಿರುವುದಾಗಿ ತಿಳಿಸಿ ಜಾಹೀರಾತು ಕಂಪೆನಿ ಬಗ್ಗೆ ಮಾತನಾಡಿದ್ದಾನೆ.

ಹರಿಯಾಣದಿಂದ ಜಾಹೀರಾತು ಏಜೆನ್ಸಿ ತೆಗೆಸಿಕೊಡುವುದಾಗಿ ನಂಬಿಸಿ 50,000 ರೂ. ಪಡೆದುಕೊಂಡಿದ್ದು. ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ದೂರಿದ್ದಾರೆ. ಈ ಬಗ್ಗೆ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next