Advertisement

176 ಕೋಟಿ. ರೂ ವಂಚಿಸಿದ್ದವ ದೇಶ ತೊರೆವ ಮೊದಲೇ ಬಲೆಗೆ!

02:33 PM Jul 04, 2023 | Team Udayavani |

ಬೆಂಗಳೂರು: ಬಡವರ ಹೆಸರಿನಲ್ಲಿ ಕಂಪನಿಗಳನ್ನು ತೆರೆದು, ನಕಲಿ ಬಿಲ್‌ಗ‌ಳನ್ನು ಸೃಷ್ಟಿಸಿ ತೆರಿಗೆ ವಂಚಿಸಿ, ಸರ್ಕಾರಕ್ಕೆ 176 ಕೋಟಿ ರೂ. ಪಂಗನಾಮ ಹಾಕಿ, ದೇಶ ತೊರೆಯಲು ಯತ್ನಿಸಿದ್ದ ವಂಚಕ ಖದೀಮನನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ.

Advertisement

ಚೆನ್ನೈ ನಿವಾಸಿಯಾಗಿರುವ 34 ವರ್ಷದ ವ್ಯಕ್ತಿ ಹಾಗೂ ಅವನ ತಂಡದವರು, ಬಡವರಿಗೆ ಬ್ಯಾಂಕ್‌ ಸಾಲ ಮಾಡಿಸಿಕೊಡುವುದಾಗಿ ನಂಬಿಸಿ, ಆಧಾರ್‌-ಪ್ಯಾನ್‌ ಕಾರ್ಡ್‌ಗಳ ಮಾಹಿತಿ ಪಡೆದಿದ್ದರು. ಬಳಿಕ ಅವುಗಳನ್ನ ಬಳಸಿ, ಬಡವರ ಹೆಸರಲ್ಲೇ ಕೆಲ ಕಂಪನಿಗಳನ್ನೂ ತೆರೆದಿದ್ದಾರೆ. ಸಂಸ್ಥೆಗಳ ಮೂಲಕ 175.88 ಕೋಟಿ ರೂ. ಮೌಲ್ಯದ ನಕಲಿ ಬಿಲ್‌ಗ‌ಳನ್ನು ಸೃಷ್ಟಿಸಿ, ವಂಚಿಸಿದ್ದಾರೆ.

ಈ ಗುಂಪಿನ ಒಬ್ಬನನ್ನು ಪೊಲೀಸರು ಬಂಧಿಸಿದ ಬಳಿಕ ಇಡೀ ಜಾಲದ ಬಗ್ಗೆ ಮಾಹಿತಿ ದೊರೆತಿದ್ದು, ಈ ತಂಡದ ಮಾಸ್ಟರ್‌ ಮೈಂಡ್‌ ಎನ್ನಲಾಗುವ ವಂಚಕನನ್ನು ಇತ್ತೀಚೆಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದೇಶ ತೊರೆಯಲು ಮುಂದಾಗಿದ್ದ ಸಂದರ್ಭದಲ್ಲಿ ಬಂಧಿಸಿರುವುದಾಗಿ ಜಿಎಸ್‌ಟಿ ಗುಪ್ತಚರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next