Advertisement

ಉದ್ಯೋಗ ಕೊಡಿಸುವುದಾಗಿ ಕೋಟ್ಯಾಂತರ ರೂ. ವಂಚನೆ: ಐಷಾರಾಮಿ ವಂಚಕ ಪೊಲೀಸ್ ಬಲೆಗೆ

02:52 PM Nov 12, 2020 | keerthan |

ಚಿಕ್ಕಮಗಳೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಚಿಕ್ಕಮಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರು ಮೂಲದ ಪ್ರಭಾಕರ್ ಆರೋಪಿಯಾಗಿದ್ದು ಈತ ಇದುವರೆಗೂ 48 ಮಂದಿಗೆ ಕೆಲಸದ ಆಸೆ ಹುಟ್ಟಿಸಿ ಸುಮಾರು 2 ಕೋಟಿಗೂ ಅಧಿಕ ಹಣ ವಂಚಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

Advertisement

ಇಂಡಿಯನ್ ಪೋಸ್ಟ್, ಇಸ್ರೋ, ಮೆಸ್ಕಾಂ, ಪಿಯುಸಿ, ಎಸ್ಎಸ್ಎಲ್ ಸಿ ಬೋರ್ಡ್ ನಲ್ಲಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರಿ ಕೊಡಿಸುವುದಾಗಿ ಹೇಳಿ ಪ್ರಭಾಕರ್ ವಂಚನೆ ನಡೆಸುತ್ತಿದ್ದ. ವಂಚಿಸಿದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

ವಂಚನೆಗೆ ಒಳಗಾದ ಚಿಕ್ಕಮಗಳೂರು ಉಮೇಶ್ ಎಂಬುವರ ದೂರಿನ ಮೇರೆಗೆ ನಗರ ಠಾಣೆ ಪೊಲೀಸರು ಆರೋಪಿ ಪ್ರಭಾಕರ್ ನನ್ನು ವಶಕ್ಕೆ ಪಡೆದು ತನಿಖೆ ನಡೆಸುವ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಬೆಂಕಿಯಲ್ಲಿ ಬೆಂದ ಬದುಕು: ಮದುವೆ ಮನೆಯ ಸಂತೋಷ ಕಿತ್ತುಕೊಂಡ ಬೆಂಕಿಯ ಕಿನ್ನಾಲಿಗೆ

ವಂಚನೆ ಹಣದಲ್ಲಿ ತಿರುಪತಿ ತಿಮ್ಮಪ್ಪ ನಿಗೆ 5 ಲಕ್ಷ ಕಾಣಿಕೆ ನೀಡಿ, ಹೆಲಿಕಾಪ್ಟರ್ ನಲ್ಲೇ ತೀರ್ಥಯಾತ್ರೆ ನಡೆಸುತ್ತಿದ್ದ. ರಾಜ್ಯಾದ್ಯಂತ ಯುವಕ-ಯುವತಿಯರಿಗೆ ವಂಚನೆ ಮಾಡಿದ್ದು, ಕೃತ್ಯಕ್ಕೆ ನಕಲಿ ಆಫರ್ ಲೆಟರ್ ನೀಡಿ ಒಬ್ಬೊಬ್ಬರಿಂದ 10-15 ಲಕ್ಷ ರೂ. ಪಡೆದುಕೊಳ್ಳುತ್ತಿದ್ದ.

Advertisement

ಬಂಧಿತನಿಂದ ಕೃತ್ಯಕ್ಕೆ ಬಳಸಿದ್ದ ಕಂಪ್ಯೂಟರ್, ಇನ್ನೋವಾ ಕಾರು ಸೇರಿದಂತೆ ವಿವಿಧ ಇಲಾಖೆಗಳ ನಕಲಿ ಪೋಸ್ಟ್ ಕವರ್, ಲೇಟರ್ ಹೆಡ್, ನಕಲಿ ಗುರುತು ಚೀಟಿ ಹಾಗೂ 60 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next