Advertisement

ಭಟ್ಕಳ: ನಕಲಿ ಖಾತೆ ಸೃಷ್ಟಿಸಿ ಹಣ ದೋಚಿದ ಕಳ್ಳರು

11:03 AM Sep 28, 2020 | sudhir |

ಭಟ್ಕಳ: ನಕಲಿ ಖಾತೆ ಸೃಷ್ಟಿಸಿ ಹಣ ಲಪಟಾಯಿಸುವ ಬೃಹತ್‌ ಜಾಲವೊಂದು ಕಾರ್ಯ ನಿರ್ವಹಿಸುತ್ತಿದ್ದು ಅನೇಕ ಅಮಾಯಕರು ಇವರ ಮೋಡಿಗೆ ಬಲಿಯಾಗಿರುವ ಕುರಿತು ಪದೇ ಪದೇ ವರದಿಗಳು ಬರುತ್ತಲೇ ಇವೆಯಾದರೂ ಜನ ಎಚ್ಚೆತ್ತುಕೊಂಡಿಲ್ಲ.

Advertisement

ಕಳೆದ ಹಲವಾರು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್‌ ಇಲಾಖೆ ಅಧಿಕಾರಿಗಳದ್ದೇ ನಕಲು ಫೇಸ್‌ಬುಕ್‌ ಖಾತೆ ಸೃಷ್ಟಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ಸುದ್ದಿಯಾಗಿದ್ದಲ್ಲದೇ ವ್ಯಾಪಕವಾಗಿ ಯಾರೂ ಈ ಕುರಿತು ಮೋಸ ಹೋಗಬಾರದು ಎನ್ನುವ ಸಂದೇಶವನ್ನು ಕೂಡಾ ರವಾನಿಸಲಾಗಿತ್ತು. ಆದರೂ ಸಹ ಶಿಕ್ಷಕರೊಬ್ಬರ ನಕಲಿ ಫೇಸ್‌ ಬುಕ್‌ ಖಾತೆ ನಂಬಿ ಹಣ ಕಳೆದುಕೊಂಡಿರುವ ಇನ್ನೊಂದು ಘಟನೆ ವರದಿಯಾಗಿದೆ.

ಸಾಹಿತಿ ಹಾಗೂ ಶಿಕ್ಷಕ ಶ್ರೀಧರ ಶೇಟ್‌ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ಅವರ ಸ್ನೇಹಿತರಿಗೆ, ಶಿಷ್ಯರಿಗೆ ಹಣ ಕಳುಹಿಸುವಂತೆ ಕೋರಿಕೊಳ್ಳಲಾಗಿದ್ದು ಇಬ್ಬರು ಹಣ ಪಾವತಿಸಿದ್ದಾರೆ ಎನ್ನಲಾಗಿದೆ. ನಂತರ ಇವರ ಪರಿಚಿತರು ಕೆಲವರು ದೂರವಾಣಿ ಮಾಡಿ ಹೇಳಿ ನಿಮ್ಮ ಖಾತೆಯಲ್ಲಿ ಹಣಕ್ಕಾಗಿ ಬೇಡಿಕೆ ಬಂದಿದೆ ಎಂದಾಗಲೇ ಇವರಿಗೆ ವಿಷಯ ತಿಳಿದು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ವಂಚಕರು ಕಿಂಚಿತ್‌ ಹಣವನ್ನು ದೋಚಿಯಾಗಿದೆ. ಸಾಮಾಜಿಕ ಜಾಲತಾಣವನ್ನು ಉಪಯೋಗಿಸುವಾಗ ಅತ್ಯಂತ ಜಗರೂಕರಾಗಿರಬೇಕು ಎನ್ನುವುದನ್ನು ಎಲ್ಲಿಯ ತನಕ ಜನ ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯ ತನಕ ಇಂತಹ ಮೋಸಗಾರರು ತಮ್ಮ ಕೈಚಳಕವನ್ನು ತೋರಿಸುತ್ತಲೇ ಇರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next