ಪ್ಯಾರಿಸ್ : ಇಲ್ಲಿನ Louvre museum ಬಳಿ ತನ್ನ ಮೇಲೆ ಚೂರಿಯಿಂದ ಮಾರಣಾಂತಿಕ ದಾಳಿ ನಡೆಸಲು ಮುಂದಾದ ವ್ಯಕ್ತಿಯ ಮೇಲೆ ಫ್ರೆಂಚ್ ಸೈನಿಕನೋರ್ವ ಗುಂಡು ಹಾರಿಸಿ ಆತನನ್ನು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ವರದಿಯಾಗಿದೆ.
ಚೂರಿ ದಾಳಿಯ ಘಟನೆಯನ್ನು ಅನುಸರಿಸಿ ಮ್ಯೂಸಿಯಂ ಸುತ್ತಮುತ್ತಲಿನ ಪ್ರದೇಶಗಳನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು ಪಾದಚಾರಿಗಳ ಓಡಾಟವನ್ನು ನಿರ್ಬಂಧಿಸಿದ್ದಾರೆ.
ಪ್ಯಾರಿಸ್ ಮ್ಯೂಸಿಯಂ ಪ್ರದೇಶದಲ್ಲಿ ಸಾರ್ವಜನಿಕ ಭದ್ರತೆಗೆ ತೀವ್ರ ಅಪಾಯ ಒದಗಿರುವ ಘಟನೆ ನಡೆದಿದೆ ಎಂದು ಫ್ರಾನ್ಸಿನ ಒಳಾಡಳಿತ ಸಚಿವಾಲಯ ಹೇಳಿದೆ.
ಚೂರಿ ದಾಳಿಯ ಘಟನೆಯನ್ನು ಅನುಸರಿಸಿ Louvre ಮ್ಯೂಸಿಯಂ ಅನ್ನು ಮುಚ್ಚಲಾಗಿದೆ; ಈಗಾಗಲೇ ಮ್ಯೂಸಿಯಂನ ಒಳಗಿರುವವರನ್ನು ಅಲ್ಲೇ ಉಳಿದಿರುವಂತೆ ಸೂಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಫ್ರಾನ್ಸ್‌ನಲ್ಲಿ ಕಳೆದ ಎರಡು ವರ್ಷಗಳಲ್ಲಿ ಇಸ್ಲಾಮಿಕ್ ಉಗ್ರರಿಂದ ಹಲವಾರು ದಾಳಿಗಳು ನಡೆದಿದ್ದು 230ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ; ಈ ದಾಳಿಗಳೆಲ್ಲ ತನ್ನದೇ ಕೃತ್ಯವೆಂದು ಐಸಿಸ್ ಉಗ್ರ ಸಂಘಟನೆ ಹೇಳಿಕೊಂಡಿದೆ.
ತೀರ ಈಚೆಗೆ ದಕ್ಷಿಣ ಫ್ರಾನ್ಸಿನ ನೈಸ್ ನಗರದಲ್ಲಿ ನಡೆದಿದ್ದ ಟ್ರಕ್ ದಾಳಿಗೆ 86 ಮಂದಿ ಬಲಿಯಾಗಿದ್ದರು.