ಪ್ಯಾರೀಸ್: ಇತ್ತೀಚೆಗೆ ಬ್ರಿಟನ್ ಸಂಸತ್ ಗೆ ನಡೆದ ಚುನಾವಣೆಯಲ್ಲಿ ಲೇಬರ್ ಪಕ್ಷ ಪ್ರಚಂಡ ಜಯಗಳಿಸುವ ಮೂಲಕ ಕೀರ್ ಸ್ಟಾರ್ಮರ್ ಪ್ರಧಾನಿ ಗದ್ದುಗೆ ಏರಿದ್ದು, ಬಲಪಂಥೀಯ ಕನ್ಸರ್ವೇಟಿವ್ ಪಕ್ಷ ಪರಾಜಯಗೊಂಡಿತ್ತು. ಇದೀಗ ಫ್ರಾನ್ಸ್ ಸಂಸತ್ ಗೆ ಭಾನುವಾರ (ಜುಲೈ 07) ನಡೆದ ಚುನಾವಣೆಯಲ್ಲಿ ಬಲಪಂಥೀಯ National Rally ಪಕ್ಷ ಸೋಲು ಕಂಡಿದ್ದು, ಎಡ ಪಕ್ಷಗಳು ಮೇಲುಗೈ ಸಾಧಿಸಿದೆ. ಆದರೆ ಯಾವುದೇ ಪಕ್ಷಗಳು ಸ್ಪಷ್ಟ ಬಹುಮತ ಪಡೆಯದೇ ಅತಂತ್ರ ಸಂಸತ್ ನಿರ್ಮಾಣವಾಗಿದೆ.
ಇದನ್ನೂ ಓದಿ:Tragedy: ರೈಲು ಹತ್ತುವ ವೇಳೆ ರೈಲಿನಡಿ ಬಿದ್ದು ಎರಡೂ ಕಾಲುಗಳನ್ನು ಕಳೆದುಕೊಂಡ ಮಹಿಳೆ
ಮರೀನ್ ಲೇ ಪೆನ್ ಅವರ ನ್ಯಾಷನಲ್ Rally ಪಕ್ಷವು ಭಾರೀ ಸೋಲನ್ನು ಅನುಭವಿಸುವ ಮೂಲಕ ಮುಖಭಂಗ ಅನುಭವಿಸಿದೆ. ಚುನಾವಣೆಯಲ್ಲಿ ಲೆಫ್ಟಿಟಿಸ್ಟ್ ನ್ಯೂ ಪಾಪ್ಯುಲರ್ ಫ್ರಂಟ್ (NFP) ಅಧಿಕ ಸ್ಥಾನಗಳನ್ನು ಪಡೆದಿದೆ. ಆದರೆ ಫ್ರಾನ್ಸ್ ನಲ್ಲಿ ಯಾವುದೇ ಒಂದು ಪಕ್ಷ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಈ ನಿಟ್ಟಿನಲ್ಲಿ ಮೈತ್ರಿ ಸರ್ಕಾರ ರಚನೆಗಾಗಿ ಪೈಪೋಟಿ ನಡೆಯುತ್ತಿರುವುದಾಗಿ ವರದಿ ತಿಳಿಸಿದೆ.
ಪ್ಯಾರೀಸ್ ನಲ್ಲಿ ಒಲಿಂಪಿಕ್ಸ್ ಗೇಮ್ಸ್ ನಡೆಯುವ ಒಂದು ವಾರದ ಮೊದಲು ಈ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಈ ಫಲಿತಾಂಶ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಅವರಿಗೆ ಹಿನ್ನಡೆ ಅನುಭವಿಸುವಂತೆ ಮಾಡಿದೆ.
ಎಡಪಕ್ಷಗಳು 182 ಸ್ಥಾನಗಳಲ್ಲಿ ಜಯ ಗಳಿಸಿದ್ದು, ಮ್ಯಾಕ್ರೋನ್ ನೇತೃತ್ವದ ಸೆಂಟ್ರಿಸ್ಟ್ ಮೈತ್ರಿಕೂಟ 168 ಸ್ಥಾನಗಳಲ್ಲಿ ಹಾಗೂ ಲೇ ಪೆನ್ ಅವರ National Rally ಮೈತ್ರಿಕೂಟ 143 ಸ್ಥಾನಗಳಲ್ಲಿ ಜಯಗಳಿಸಿರುವುದಾಗಿ ಆಂತರಿಕ ಸಚಿವಾಲಯ ಬಿಡುಗಡೆಗೊಳಿಸಿರುವ ಮಾಹಿತಿಯಲ್ಲಿ ತಿಳಿಸಿದೆ.