Advertisement
ದೇಶದಲ್ಲಿನ ಲಾಕ್‌ಡೌನ್ ಸಡಿಲಗೊಳ್ಳುವವರೆಗೂ ನಿಕೋಟಿನ್ ಮಾರಾಟದ ಮೇಲೆ ನಿಬಂಧನೆ ಹೇರಿರುವ ಸರಕಾರ ಕೇವಲ ಒಂದು ತಿಂಗಳ ಅಗತ್ಯದಷ್ಟು ಮಾತ್ರ ಮಾರಾಟ ನಡೆಸುವಂತೆ ಸೂಚಿಸಿದೆ. ಅದೂ ಪರಿಸ್ಥಿತಿ ಮತ್ತು ಸಂದರ್ಭವನ್ನು ಪರಿಶೀಲಿಸಿ ನಿಕೋಟಿನ್ ಅಂಶ ಇರುವ ಔಷಧ ಪದಾರ್ಥಗಳನ್ನು ನೀಡಬೇಕೆಂದು ತಿಳಿಸಿದೆ.
ನಿಕೋಟಿನ್ ಸೋಂಕು ತಗುಲದಂತೆ ತಡೆಯುತ್ತದೆ ಎಂಬ ಮಾಹಿತಿ ದುರ್ಬಳಕೆ ಆಗುವ ಸಾಧ್ಯತೆ ಇದೆ. ಜನರ ತಪ್ಪು ಗ್ರಹಿಕೆಗೂ ಕಾರಣವಾಗಬಹುದು. ಪರಿಣಾಮವಾಗಿ ಇನ್ನಿತರ ಆರೋಗ್ಯ ಸಮಸ್ಯೆಗಳು ಎದುರಾಗಿ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಬಹುದು. ಹಾಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರಕಾರ ಸುತ್ತೋಲೆ ಹೊರಡಿಸಿದೆ. 2 ವಿಭಿನ್ನ ವರದಿ
ಪ್ಯಾರಿಸ್‌ನ ಉನ್ನತ ಆಸ್ಪತ್ರೆಯ ಸಂಶೋಧಕರು ನಡೆಸಿದ ಸಂಶೋಧನೆಯಲ್ಲಿ ಸುಮಾರು 500 ಕೋವಿಡ್-19 ರೋಗಿಗಳನ್ನು ಪರೀಕ್ಷಿಸಿದ್ದು, ಶೇ.5ರಷ್ಟು ಮಾತ್ರ ಧೂಮಪಾನಿಗಳು ಸೋಂಕಿಗೆ ತುತ್ತಾಗಿದ್ದಾರೆ ಎಂದು ತಿಳಿದು ಬಂದಿತ್ತು. ಆದರೆ ಕಳೆದ ತಿಂಗಳು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಇದೇ ರೀತಿಯ ಸಂಶೋಧನೆ ವರದಿ ಪ್ರಕಟವಾಗಿದ್ದು, ಚೀನದ 1,000(ಶೇ.26) ಜನಸಂಖ್ಯೆಯ ಪೈಕಿ ಶೇ12.6 ರಷ್ಟು ಧೂಮಪಾನ ವ್ಯಸನಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು ಎಂದಿದೆ.
Related Articles
Advertisement
ಫ್ರಾನ್ಸ್‌ನಲ್ಲಿ ಪ್ರತಿ ವರ್ಷ ತಂಬಾಕಿನಿಂದಾಗಿ 70 ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಇದನ್ನೂ ಗಮನಿಸುವುದು ಒಳಿತು ಎಂದಿರುವ ಫ್ರಾನ್ಸ್ ಆರೋಗ್ಯ ಸಚಿವ ಆಲಿವಿಯರ್‌ವೊರಾನ್, ಕೋವಿಡ್ ಹತ್ತಿಕ್ಕಲು ನಿಕೋಟಿನ್ ಉತ್ಪನ್ನಗಳನ್ನು ಖರೀದಿಸಬೇಡಿ. ಆದಷ್ಟು ಅವುಗಳಿಂದ ದೂರ ಇರಿ. ಅದೇ ಒಳಿತು ಎಂದು ಮನವಿ ಮಾಡಿದ್ದಾರೆ.