ನವದೆಹಲಿ: ಭಾರತ, ಆಸ್ಟ್ರೇಲಿಯಾ ಪ್ರಧಾನಮಂತ್ರಿಗಳು ಮತ್ತು ಫ್ರಾನ್ಸ್‌ನ ಅಧ್ಯಕ್ಷರು ಅಕ್ಟೋಬರ್‌ನಲ್ಲಿ ಇಟಲಿಯಲ್ಲಿ ಭೇಟಿಯಾಗಲಿದ್ದಾರೆ.
ಆ ಸಂದರ್ಭದಲ್ಲಿ ಇಟಲಿಯಲ್ಲಿ ಜಿ20 ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯೂ ನಡೆಯಲಿದೆ. ಅದಕ್ಕೆ ಪೂರಕವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಆಸೀಸ್ ಪ್ರಧಾನಿ ಸ್ಕಾಟ್ ಮಾರಿಸನ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವಲ್ ಮ್ಯಾಕ್ರನ್ ಭೇಟಿಯಾಗಲಿದ್ದಾರೆ.
2020ರ ಸೆಪ್ಟೆಂಬರ್‌ನಲ್ಲಿ ಮೂರು ರಾಷ್ಟ್ರಗಳ ಒಕ್ಕೂಟ ರಚನೆಯಾಗಿತ್ತು. ಕಡಲು ಸಂಬಂಧಿ ಭದ್ರತಾ ವಿಚಾರಗಳು, ಪರಿಸರ ಮತ್ತು ಬಹುಕ್ಷೇತ್ರೀಯ ವಿಚಾರಗಳಲ್ಲಿ ಮೂರು ರಾಷ್ಟ್ರಗಳ ನಡುವೆ ಪರಸ್ಪರ ಸಹಕಾರ ನೀಡುವ ನಿಟ್ಟಿನಲ್ಲಿ ಸಹಮತಕ್ಕೆ ಬರಲಾಗಿತ್ತು.
ಇದನ್ನೂ ಓದಿ:ಬಾರ್ಸಿಲೋನಾಗೆ ಮೆಸ್ಸಿ ಭಾವುಕ ವಿದಾಯ
ಮೂರು ರಾಷ್ಟ್ರಗಳ ವಿದೇಶಾಂಗ ಸಚಿವರು ಜಿ7 ರಾಷ್ಟ್ರಗಳ ಸಮ್ಮೇಳನ ಲಂಡನ್‌ನಲ್ಲಿ ನಡೆದಿದ್ದ ಸಂದರ್ಭದಲ್ಲಿ ಭೇಟಿಯಾಗಿದ್ದರು.