Advertisement

ಫ್ರಾನ್ಸ್ ಫುಟ್ಬಾಲಿಗರು ಹಿಜಾಬ್ ಧರಿಸುವಂತಿಲ್ಲ: ಸುಪ್ರೀಂ ಕೋರ್ಟ್ ತೀರ್ಪು

04:49 PM Jun 30, 2023 | Team Udayavani |

ಪ್ಯಾರಿಸ್‌: ಫುಟ್ಬಾಲ್‌ ಆಟಗಾರರು ಹಿಜಾಬ್‌ ಧರಿಸುವಂತಿಲ್ಲ ಎಂದು ಫ್ರಾನ್ಸ್‌ ಫುಟ್‌ಬಾಲ್‌ ಸಂಸ್ಥೆ ಜಾರಿ ಮಾಡಿದ್ದ ನಿಯಮಕ್ಕೆ ಜಯ ಸಿಕ್ಕಿದೆ. ಈ ಬಗ್ಗೆ ತೀರ್ಪು ನೀಡಿರುವ ಫ್ರಾನ್ಸ್‌ನ ಸರ್ವೋಚ್ಚ ನ್ಯಾಯಾಲಯ, ಫ‌ುಟ್‌ಬಾಲ್‌ ಸಂಸ್ಥೆಗೆ ಇಂತಹ ನಿರ್ಧಾರ ಮಾಡುವ ಅಧಿಕಾರವಿದೆ ಎಂದು ಹೇಳಿದೆ.

Advertisement

(ಫ್ರಾನ್ಸ್‌ ಫುಟ್‌ಬಾಲ್‌ ಸಂಸ್ಥೆ) ಧಾರ್ಮಿಕ ಸಂಕೇತಗಳನ್ನು ಪ್ರತಿನಿಧಿಸುವ ಯಾವುದೇ ಸಂಕೇತಗಳನ್ನಾಗಲೀ, ವಸ್ತ್ರಗಳನ್ನಾಗಲೀ ಧರಿಸುವಂತಿಲ್ಲವೆಂದು ಎಫ್ಎಫ್ ಎಫ್ ಆದೇಶಿಸಿತ್ತು. ಇದರ ವಿರುದ್ಧ ಫ್ರಾನ್ಸ್‌ನಲ್ಲಿ ಕೆಲ ಫ‌ುಟ್‌ಬಾಲಿಗರು ಅಭಿಯಾನ ಆರಂಭಿಸಿದ್ದರು. “ಲೆಸ್‌ ಹಿಜಾಬಿಯಸಸ್‌’ ಎಂಬ ಹೆಸರಿನಲ್ಲಿ ಅಭಿಯಾನದ ವೇಳೆ ಕಾನೂನು ಹೋರಾಟ ಆರಂಭಿಸಲಾಗಿತ್ತು.

ಅಧಿಕೃತ ಪಂದ್ಯಗಳಲ್ಲಿ, ತಾನು ಸಂಘಟಿಸುವ ಪಂದ್ಯಗಳಲ್ಲಿ ಹಿಜಾಬ್‌ ಧರಿಸುವಂತಿಲ್ಲವೆಂದು ಎಫ್ ಎಫ್ಎಫ್ ತಿಳಿಸಿದೆ. ವಿಚಿತ್ರವೆಂದರೆ ಅಂತಾರಾಷ್ಟ್ರೀಯ ಫುಟ್‌ಬಾಲ್‌ ಸಂಸ್ಥೆ ಫಿಫಾ ಆಟಗಾರರು ಹಿಜಾಬ್‌ ಧರಿಸಬಹುದೆಂದು ಹೇಳಿದೆ. ಎರಡೂ ಸಂಸ್ಥೆಗಳ ನಿರ್ಧಾರಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವುದು ಗೊಂದಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ:Delhi Metro: ಮದ್ಯ ತರಲು ಅನುಮತಿ ನೀಡಿದ ದಿಲ್ಲಿ ಮೆಟ್ರೋ, ಆದರ ಷರತ್ತುಗಳು ಅನ್ವಯ

ಆದರೆ ಅಂತಾರಾಷ್ಟ್ರೀಯವಾಗಿ ಬಹುತೇಕ ದೇಶಗಳು ಹಿಜಾಬ್‌ ಧರಿಸುವುದಕ್ಕೆ ಒಪ್ಪಿಗೆ ನೀಡಿಲ್ಲ ಎನ್ನುವುದನ್ನು ಗಮನಿಸಬೇಕು. ಇಸ್ಲಾಮ್‌ ರಾಷ್ಟ್ರವಾದ ಇರಾನ್‌ನಲ್ಲಿ ಕೆಲವು ತಿಂಗಳ ಹಿಂದೆ ಹಿಜಾಬ್‌ ಧರಿಸುವುದಿಲ್ಲವೆಂದು ಮಹಿಳೆಯರು ಭಾರೀ ಹೋರಾಟ ನಡೆಸಿದ್ದರು. ಅದಕ್ಕೆ ಇರಾನ್‌ ದೇಶದ ಫ‌ುಟ್‌ಬಾಲ್‌ ಆಟಗಾರರು ಬೆಂಬಲ ನೀಡಿದ್ದರು!

Advertisement

ಸರ್ವೋಚ್ಚ ನ್ಯಾಯಾಲಯದ ತೀರ್ಪೇನು?: ಕ್ರೀಡಾ ಒಕ್ಕೂಟಗಳು ತಮ್ಮ ಆಟಗಾರರು ತಟಸ್ಥವಾದ ವಸ್ತ್ರ ಧರಿಸುವಂತೆ ನಿಯಮಗಳನ್ನು ರಚಿಸಬಹುದು. ಕ್ರೀಡಾಕೂಟಗಳು, ಇತರೆ ಕಾರ್ಯಕ್ರಮಗಳು ಯಾವುದೇ ಸಂಘರ್ಷವಿಲ್ಲದೇ, ಘರ್ಷಣೆಯಿಲ್ಲದೇ ನಡೆಯಬೇಕಾದರೆ ಇದು ಅಗತ್ಯ. ಹಾಗಾಗಿ ಹಿಜಾಬ್‌ ಮೇಲೆ ಎಫ್ಎಫ್ಎಫ್ ವಿಧಿಸಿರುವ ನಿಷೇಧ ಸರಿಯಾಗಿದೆ, ನಿಯಮಗಳಿಗೆ ಅನುಗುಣವಾಗಿದೆ ಎಂದು ಹೇಳಿದೆ.

ವಿಚಿತ್ರವೆಂದರೆ ಮುಂದಿನ ವರ್ಷ ಫ್ರಾನ್ಸ್‌ನ ಪ್ಯಾರಿಸ್‌ ನಲ್ಲಿ ಒಲಿಂಪಿಕ್ಸ್‌ ನಡೆಯಲಿದೆ. ಈ ವೇಳೆ ಫ‌ುಟ್‌ಬಾಲ್‌ ಕೂಡ ಇರಲಿದೆ. ಆಗ ಹಿಜಾಬ್‌ ಧರಿಸಲು ಅವಕಾಶ ನೀಡಲಾಗುತ್ತದೋ, ಇಲ್ಲವೋ ಎಂದು ಗಮನಿಸಬೇಕು. ಒಲಿಂಪಿಕ್ಸ್‌ನಲ್ಲಿ ಫಿಫಾ ಫ‌ುಟ್‌ಬಾಲ್‌ ಪಂದ್ಯಗಳನ್ನು ಸಂಘಟಿಸುತ್ತದೆ. ಹೀಗಾಗಿ ಫ್ರಾನ್ಸ್‌ ಸಂಸ್ಥೆಯ ನಿಯಮ ಜಾರಿಯಾಗುತ್ತದೋ, ಫಿಫಾದ ನಿಯಮಗಳು ಪಾಲನೆಯಾಗುತ್ತವೋ ಅಥವಾ ಒಲಿಂಪಿಕ್ಸ್‌ ಸಂಸ್ಥೆ ತನ್ನದೇ ನಿಯಮವನ್ನು ಜಾರಿ ಮಾಡುತ್ತದೋ ಎನ್ನುವುದು ಇಲ್ಲಿನ ಪ್ರಶ್ನೆ.

Advertisement

Udayavani is now on Telegram. Click here to join our channel and stay updated with the latest news.

Next