Advertisement

ಫ್ರಾನ್ಸ್‌  ಫುಟ್ ಬಾಲ್‌ ಕಪ್ತಾನ ಹ್ಯೂಗೊ ಲಾರಿಸ್‌ ನಿವೃತ್ತಿ

12:03 AM Jan 11, 2023 | Team Udayavani |

ಪ್ಯಾರಿಸ್‌: ಫ್ರಾನ್ಸ್‌ ವಿಶ್ವಕಪ್‌ ಫುಟ್ ಬಾಲ್‌ ವಿಜೇತ ತಂಡದ ನಾಯಕ ಹಾಗೂ ಗೋಲ್‌ಕೀಪರ್‌ ಹ್ಯೂಗೊ ಲಾರಿಸ್‌ ಇನ್ನು ಕಾಲ್ಚೆಂಡಿನ ನಂಟಿನಿಂದ ದೂರ ಉಳಿಯಲಿದ್ದಾರೆ. 36 ವರ್ಷದ ಅವರು ಅಂತಾರಾಷ್ಟ್ರೀಯ ಫ‌ುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದರು.

Advertisement

ಕಳೆದ 14 ವರ್ಷಗಳ ಅವಧಿಯಲ್ಲಿ ಹ್ಯೂಗೊ ಲಾರಿಸ್‌ ಫ್ರಾನ್ಸ್‌ ಪರ ಸರ್ವಾಧಿಕ 145 ಪಂದ್ಯಗಳನ್ನು ಆಡುವ ಮೂಲಕ ದಾಖಲೆ ಸ್ಥಾಪಿಸಿದ್ದಾರೆ. ಹಾಗೆಯೇ ಅತ್ಯಧಿಕ 121 ಪಂದ್ಯಗಳಲ್ಲಿ ಫ್ರಾನ್ಸ್‌ ತಂಡವನ್ನು ಮುನ್ನಡೆಸಿದ್ದು ಕೂಡ ದಾಖಲೆ.

2008ರಲ್ಲಿ ಅಂತಾರಾಷ್ಟ್ರೀಯ ಫುಟ್ ಬಾಲ್‌ ಗೆ ಪದಾರ್ಪಣೆ ಮಾಡಿದ ಹ್ಯೂಗೊ ಲಾರಿಸ್‌, 4 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಡಿದ್ದಾರೆ. 2018ರಲ್ಲಿ ಇವರ ಸಾರಥ್ಯ ದಲ್ಲೇ ಫ್ರಾನ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. 2022ರ ಕತಾರ್‌ ಫೈನಲ್‌ನಲ್ಲಿ ಫ್ರಾನ್ಸ್‌ ಪುನಃ ಪ್ರಶಸ್ತಿ ಸುತ್ತಿಗೆ ನೆಗೆದು ಮುನ್ನಡೆ ಸಾಧಿಸಿತ್ತಾದರೂ ಶೂಟೌಟ್‌ನಲ್ಲಿ ಆರ್ಜೆಂಟೀನಾಕ್ಕೆ ಶರಣಾಯಿತು.”ಎಲ್ಲರ ನಿರ್ಗಮನಕ್ಕೂ ಸಮಯ ಬಂದೇ ಬರುತ್ತದೆ.

ಹಾಗೆಯೇ ನನ್ನ ಪಾಲಿನ ಸಮಯ ಇದೀಗ ಬಂದಿದೆ. ಫ್ರಾನ್ಸ್‌ ತಂಡ ಯಾರನ್ನೂ ಅವಲಂಬಿಸಿಲ್ಲ ಎಂಬುದನ್ನು ಕಳೆದ ಅನೇಕ ವರ್ಷಗಳಿಂದ ಸಾಬೀತುಪಡಿಸುತ್ತ ಬಂದಿದೆ.

ತಂಡದ ಗೋಲ್‌ ಕೀಪಿಂಗ್‌ ಜವಾಬ್ದಾರಿ ನಿಭಾಯಿಸಲು ಮೈಕ್‌ ಮೆಗ್ನಾನ್‌ ಸಿದ್ಧರಾಗಿ ದ್ದಾರೆ. ನಾನಿನ್ನು ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಬೇಕಿದೆ’ ಎಂಬುದಾಗಿ ಹ್ಯೂಗೊ ಲಾರಿಸ್‌ ವಿದಾಯ ಸಂದರ್ಭದಲ್ಲಿ ಹೇಳಿದರು.

Advertisement

ಹ್ಯೂಗೊ ಲಾರಿಸ್‌ ನೇತೃತ್ವದಲ್ಲೇ ಫ್ರಾನ್ಸ್‌ 2021ರ ನ್ಯಾಶನಲ್‌ ಲೀಗ್‌ ಚಾಂಪಿಯನ್‌ ಆಗಿ ಮೂಡಿಬಂದಿತ್ತು. 2016ರ ಯುರೋ ಪಿಯನ್‌ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶಿಸಿತ್ತು.

ಫ್ರಾನ್ಸ್‌ ಫುಟ್ ಬಾಲ್‌ ಸೇವಕ
ಫುಟ್ ಬಾಲ್‌ ಗೆ ವಿದಾಯ ಹೇಳಿದ ಹ್ಯೂಗೊ ಲಾರಿಸ್‌ ಅವರನ್ನು ಕೋಚ್‌ ದಿದಿ ಯರ್‌ ಡೆಶ್‌ಚಾಂಪ್ಸ್‌, “ಫ್ರಾನ್ಸ್‌ ಫ‌ುಟ್‌ಬಾಲ್‌ನ ಸೇವಕ’ ಎಂಬುದಾಗಿ ಹೊಗಳಿದ್ದಾರೆ.

“ಉತ್ತುಂಗದಲ್ಲಿರುವಾಗಲೇ ಲಾರಿಸ್‌ ಫುಟ್ ಬಾಲ್‌ ಬಿಟ್ಟು ಹೋಗುತ್ತಿದ್ದಾರೆ. ಅವರಿಗೆ ಇನ್ನೂ ಫ್ರಾನ್ಸ್‌ ತಂಡದಲ್ಲಿ ಅವಕಾಶ ವಿತ್ತು. ಆದರೆ ನಾವು ಅವರ ನಿರ್ಧಾರವನ್ನು ಗೌರವಿಸಬೇಕಾಗುತ್ತದೆ. ಲಾರಿಸ್‌ ತಂಡದ ಕೋಚ್‌ ಎಂಬುದು ನನ್ನ ಪಾಲಿನ ಹೆಮ್ಮೆ’ ಎಂದು ಡೆಶ್‌ಚಾಂಪ್ಸ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next