Advertisement
ಸದ್ಯ ಸಂಪರ್ಕ ರಸ್ತೆಯು 4.50 ಮೀ.ನಿಂದ 6 ಮೀ. ಆಗಲಇದ್ದು, ಈ ರಸ್ತೆ ಮೇಲ್ದರ್ಜೆಗೇರಲಿದೆ. ಇದೀಗ ನೂತನ ಯೋಜನೆಯ ಪ್ರಕಾರ 1078 ಮೀ. ಉದ್ದದ ರಸ್ತೆಯನ್ನು 18 ಮೀ. ಅಗಲಕ್ಕೆ ವಿಸ್ತರಿಸಿ 4 ಪಥದ ಕಾಂಕ್ರೀಟ್ ರಸ್ತೆ, ಮೀಡಿಯನ್, ದಾರಿದೀಪಗಳು, ಎರಡೂ ಭಾಗಗಳಲ್ಲಿ ಆರ್‌ಸಿಸಿ ಮಳೆ ನೀರು ಚರಂಡಿ, ತಗ್ಗು ಪ್ರದೇಶದ ಭಾಗದಲ್ಲಿ ಆರ್‌ಸಿಸಿ ತಡೆಗೋಡೆ, ಗ್ರಾನೈಟ್ ಕಲ್ಲು ಪಿಚ್ಚಿಂಗ್ ಒಳಗೊಂಡಿದೆ. ಸದ್ಯ ಪ್ರಸ್ತಾವಿಕ ರಸ್ತೆಯು ರಾ.ಹೆ. 66ರಿಂದ ಮಹಾಕಾಳಿ ಪಡ್ಪು ರೈಲ್ವೇ ಕೆಳಸೇತುವೆ ಮುಖಾಂತರ ಶೆಟ್ಟಿಬೆಟ್ಟು ಜಂಕ್ಷನ್, ಮೊರ್ಗನ್ಸ್‌ಗೇಟ್ ಜಂಕ್ಷನ್‌ವರೆಗೆ ಸದ್ಯ ಇರುವ ಕಿರಿದಾದ ಕಾಲುದಾರಿ ವಿಸ್ತರಿಸಿ ಚತುಷ್ಪತ ರಸ್ತೆಯಾಗಿ ಅಭಿವೃದ್ಧಿಗೊಳ್ಳಲಿದೆ.
ಅಧಿಕಾರಿಗಳು ಹೇಳುವಂತೆ ರಸ್ತೆಯಲ್ಲಿ ನಾಲ್ಕು ಆರ್‌ಯುಬಿ ಅಳವಡಿಸಲಾಗುತ್ತಿದ್ದು, ಇದು ರಾಜ್ಯದಲ್ಲಿ ಹೊಸ ಪ್ರಯೋಗ. ಪ್ರಸ್ತುತ ಒಂದು ರೈಲ್ವೇ ಹಳಿ ಭಾಗದಲ್ಲಿ ಆರ್‌ಯುಬಿ ಇದ್ದು, ಇನ್ನೊಂದು ರೈಲು ಹಳಿ ಭಾಗದಲ್ಲಿ ಲೆವೆಲ್ ಕ್ರಾಸಿಂಗ್ ನಿರ್ಮಾಣ ಮಾಡಲಾಗಿದೆ. ಸದ್ಯ ಇರುವಂತಹ ಲೆವೆಲ್ ಕ್ರಾಸಿಂಗ್ ಭಾಗದಲ್ಲಿ ರೈಲು ಸಂಚಾರಕ್ಕಾಗಿ ರೈಲ್ವೇ ಗೇಟ್ ಹಾಕಿದಾಗ ವಾಹನಗಳು ಸಾಲು ನಿಂತು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ಇದನ್ನು ತಪ್ಪಿಸಿ ಸುಗಮ ಸಂಚಾರ ಕಲ್ಪಿಸಲು 30.7 ಕೋಟಿ ರೂ.ಗಳನ್ನು ಮಂಗಳೂರು ಸ್ಮಾರ್ಟ್‌ಸಿಟಿ ವತಿಯಿಂದ ಠೇವಣಿ ವಂತಿಗೆ ಆಧಾರದಲ್ಲಿ ರೈಲ್ವೇ ಇಲಾಖೆಯು ನಿರ್ಮಾಣ ಕಾರ್ಯವಹಿಸಲಿದೆ.
Related Articles
ಜೆಪ್ಪು ಮಹಾಕಾಳಿಪಡು³ ಪ್ರದೇಶದ ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆ ಈಡೇರುವ ಹಂತಕ್ಕೆ ಬಂದಿದೆ. 49.95 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಸ್ಮಾರ್ಟ್‌ಸಿಟಿ, ರೈಲ್ವೇ ಇಲಾಖೆ ಸಹಕಾರದೊಂದಿಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯ. ಮಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಬದ್ಧ.
-ಡಿ. ವೇದವ್ಯಾಸ ಕಾಮತ್, ಶಾಸಕರು
Advertisement