Advertisement
ಮೆಡಿಕಲ್ ಕಾಲೇಜಿನ ಅಕಾಡೆಮಿಕ್ ಸಮುಚ್ಚಯದ ಕಾಮಗಾರಿಯು ಮುಕ್ತಾಯದ ಹಂತದಲ್ಲಿದೆ.ಇದು ಸುಮಾರು 25 ಕೋಟಿ ರೂಪಾಯಿಗಳ ವೆಚ್ಚದ ಯೋಜನೆಯಲ್ಲಿ ನಿರ್ಮಾಣಗೊಳ್ಳುತಿದೆ. ಆದರೆ ಇದಕ್ಕಿರುವ ಪೀಠೊಪಕರಣಗಳು, ಲ್ಯಾಬ್ ಪರಿಕರಗಳ ಖರೀದಿಯ ಕರಾರು ಇನ್ನಷ್ಟೇ ನಡೆಯಬೇಕಿದೆ. ಅದೇ ರೀತಿ ಬಹುನಿರೀಕ್ಷಿತ ಆಸ್ಪತ್ರೆಯ ನಿರ್ಮಾಣವು ಇನ್ನಷ್ಟೇ ಆಗಬೇಕಾಗಿದೆ. ಸುಮಾರು 89 ಕೋಟಿ ರೂಪಾಯಿಗಳ ವೆಚ್ಚದಲ್ಲಿ 500 ರಷ್ಟು ಬೆಡ್ ಗಳ ಆಸ್ಪತ್ರೆ ಸಮುಚ್ಚಯದ ನಿರ್ಮಾಣದ ಟೆಂಡರನ್ನು ಈರೋಡ್ (ತಮಿಳುನಾಡಿನ) ಆರ್.ಆರ್. ತುಳಸಿ ಎಂಬ ಸಂಸ್ಥೆಯು ವಹಿಸಿಕೊಂಡಿದೆ. ಇದರ ಕಾಮಗಾರಿಯು ಮುಂದಿನ ತಿಂಗಳಲ್ಲಿ ಆರಂಭಗೊಳ್ಳುವುದೆಂದು ಸಂಬಂಧಪಟ್ಟ ಎಂಜಿನಿ ಯರಿಂಗ್ ವಿಭಾಗ ತಿಳಿಸಿದೆ.ಇದೀಗ ಕಾರ್ಮಿಕರ ವಸತಿ ಹಾಗೂ ಕಚೇರಿಗಾಗಿ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಮೆಡಿಕಲ್ ಕಾಲೇಜಿಗೆ ಅವಶ್ಯವಿರುವ ಕ್ರೀಡಾಂಗಣ, ಹಾಸ್ಟೆಲ್ ಹಾಗೂ ಇನ್ನಿತರ ಪ್ರಮುಖ ಬ್ಲಾಕ್ ಗಳ ನಿರ್ಮಾಣ ಯೋಜನೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದಕ್ಕೆ ಮೊತ್ತ ಕೂಡ ಮಂಜೂರುಗೊಳ್ಳಬೇಕಾಗಿದೆ.