Advertisement

ಬಂಡೀಪುರದಲ್ಲಿ ನಾಲ್ಕು ಹುಲಿಗಳ ದರ್ಶನ

03:21 PM May 03, 2018 | Team Udayavani |

ಗುಂಡ್ಲುಪೇಟೆ: ಇತ್ತೀಚೆಗೆ ಬಿದ್ದ ಮಳೆಯಿಂದ ನಳನಳಿಸುತ್ತಿರುವ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ದಲ್ಲಿ ಜಿಂಕೆಗಳು, ನವಿಲು, ಕಾಡೆಮ್ಮೆ, ಆನೆಗಳು ಸೇರಿದಂತೆ ಅನೇಕ ವನ್ಯ ಜೀವಿಗಳು ಹಿಂಡು ಹಿಂಡಾಗಿ ದರ್ಶನ ನೀಡುತ್ತಿರುವುದು ಪ್ರವಾಸಿಗರಿಗೆ ಪುಳಕ ನೀಡುತ್ತಿದೆ.

Advertisement

ವಿಶ್ವದಲ್ಲಿಯೇ ಅತಿಹೆಚ್ಚಿನ ಹುಲಿ ಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾದ ಬಂಡೀಪುರಕ್ಕೆ ಸಫಾರಿಗೆ ತೆರಳಿದ ಪ್ರವಾಸಿಗರಿಗೆ ದಿನನಿತ್ಯವೂ ಹುಲಿಗಳ ದರ್ಶನವಾಗುತ್ತಿದೆ. ಬೇಸಿಗೆಯ ಬಿಸಿಲಿನ ತಾಪವನ್ನು ತಣಿಸಿ ಕೊಳ್ಳಲು ಗಂಟೆಗಟ್ಟಲೆ ನೀರಿನಲ್ಲಿ ಅರ್ಧ ದೇಹವನ್ನು ಮುಳುಗಿಸಿ ಪ್ರವಾಸಿಗರತ್ತ ಪೋಸ್‌ ನೀಡುತ್ತಿರುವ ಹುಲಿಗಳು ಹೆಚ್ಚಿನ ಪ್ರವಾಸಿಗರನ್ನು ಅದರಲ್ಲಿಯೂ ವನ್ಯಜೀವಿ ಛಾಯಾಗ್ರಾಹಕರನ್ನು ಹೆಚ್ಚಾಗಿ ತನ್ನತ್ತ ಆಕರ್ಷಿಸುತ್ತಿದೆ.

ಬಂಡೀಪುರ ಸಫಾರಿಗೆ ತೆರಳಿದ್ದ ವನ್ಯಜೀವಿ ಛಾಯಾಗ್ರಾಹಕ ಬಾಲ ಮುರಳಿ ಎಂಬುವರಿಗೆ ಸಫಾರಿ ವಲಯದ ನಂಜಾಪುರ ಕೆರೆಯಲ್ಲಿ ಬಿರು ಬೇಸಿಗೆಯ ಬಿಸಿಲಿನಿಂದ ದಾಹ ತಣಿಸಿ ಕೊಂಡು ಅರ್ಧದೇಹವನ್ನು ನೀರಿನಲ್ಲಿ ಮುಳುಗಿಸಿ ವಿಶ್ರಾಂತಿ ಪಡೆಯುತ್ತಿರುವ 4 ಹುಲಿಗಳ ದರ್ಶನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next