Advertisement

ಸ್ಪೇಸ್‌ ಟೂರ್‌ ಯಶಸ್ವಿ

12:23 AM Sep 20, 2021 | Team Udayavani |

ನ್ಯೂಯಾರ್ಕ್‌: ವೃತ್ತಿಪರ ಗಗನಯಾತ್ರಿಗಳಲ್ಲದ ನಾಲ್ವರು ನಾಗರಿಕರನ್ನು ಬಾಹ್ಯಾಕಾಶ ಯಾತ್ರೆಗೆ ಕಳುಹಿಸಿದ್ದ ಸ್ಪೇಸ್‌ ಎಕ್ಸ್‌ನ ಚೊಚ್ಚಲ “ಸ್ಪೇಸ್‌ ಟೂರ್‌’ ಸಫ‌ಲತೆ ಕಂಡಿದೆ.

Advertisement

“ದಿ ಇನ್‌ಸ್ಪಿರೇಶನ್‌- 4′ ನೌಕೆಯ ಸಿಬಂದಿ ಶನಿವಾರ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಮೂರು ದಿನಗಳಲ್ಲಿ ಇವರು 90ಕ್ಕೂ ಅಧಿಕ ಬಾರಿ ಭೂಮಿಗೆ ಸುತ್ತು ಹಾಕಿದ್ದು, ಅಟ್ಲಾಂಟಿಕ್‌ ಸಾಗರದ ಮಧ್ಯೆ ಇಳಿದ ಇವರನ್ನು ಸ್ಪೇಸ್‌ಎಕ್ಸ್‌ನ ಸ್ಪೀಡ್‌ ಬೋಟ್‌ ಬರಮಾಡಿಕೊಂಡಿದೆ.

ಮಿಲಿಯನ್‌ ಡಾಲರ್‌ ಉದ್ಯಮಿ ಐಸಾಕ್‌ಮನ್‌, ಜಿಯೋಸೈಂಟಿಸ್ಟ್‌ ಸಿಯಾನ್‌ ಪ್ರೊಕ್ಟಾರ್‌, ಫಿಸಿಶಿಯನ್‌ ಅಸಿಸ್ಟೆಂಟ್‌ ಮತ್ತು ಕ್ಯಾನ್ಸರ್‌ನಿಂದ ಗೆದ್ದ  ಹ್ಯಾಲೆ ಆರ್ಸೆನಿಯಾಕ್ಸ್‌ ಮತ್ತು ಏರ್‌ಸ್ಪೇಸ್‌ ಡೇಟಾ ಎಂಜಿನಿಯರ್‌ ಕ್ರಿಸ್‌ ಸೆಂಬ್ರೋಸ್ಕಿ ಅವರು ಪ್ರತೀ ಸೀಟಿಗೆ 200 ಮಿಲಿಯನ್‌ ಡಾಲರ್‌ ನೀಡಿ, ಬಾಹ್ಯಾಕಾಶ ಟ್ರಿಪ್‌ ಕೈಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next