Advertisement

ತಂಡದಿಂದ ಹಲ್ಲೆ: ಆರೋಪ ಮಹಿಳೆ, ಮಗು ಸಹಿತ ನಾಲ್ವರು ಆಸ್ಪತ್ರೆಗೆ ದಾಖಲು

12:04 AM Jul 12, 2023 | Team Udayavani |

ಕಡಬ: ಮಗುವಿಗೆ ಔಷಧ ತರಲೆಂದು ಆಟೋದಲ್ಲಿ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ತಂಡವೊಂದು ರಿಕ್ಷಾದಿಂದ ಎಳೆದು ಹಾಕಿ ಹಲ್ಲೆ ನಡೆಸಿದ ಪರಿಣಾಮ ಮಹಿಳೆ, ಪುಟಾಣಿ ಮಗು ಸಹಿತ ನಾಲ್ವರು ಕಡಬ ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ಕಲ್ಲುಗುಡ್ಡೆಯಲ್ಲಿ ನಡೆದಿದೆ.

Advertisement

ಆರ್ಲ ನಿವಾಸಿ, ಸೈನಿಕ ಅಝೀಝ್ ಅವರ ಪತ್ನಿ ಫೌಝಿಯಾ, ಪುತ್ರ ಐಮಾನ್‌, ಫೌಝಿಯಾ ಅವರ ತಂದೆ ಅಬ್ಟಾಸ್‌ ಮತ್ತು ಮಗು ಆಸ್ಪತ್ರೆಗೆ ದಾಖಲಾದವರು.

ಸೋಮವಾರ ರಾತ್ರಿ ವೇಳೆ ಆದಂ ಅವರ ಅಟೋದಲ್ಲಿ ಇವರು ಔಷಧಕ್ಕೆಂದು ತೆರಳುತ್ತಿದ್ದಾಗ ಕಾರಿನಲ್ಲಿ ಆಗಮಿಸಿ ನೆರೆಮನೆಯವರಾದ ಮಜಿದ್‌, ಅಶ್ರಫ್‌, ಅಬ್ಟಾಸ್‌ ರಿಕ್ಷಾದಿಂದ ಅವರನ್ನು ಎಳೆದು ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಜಾಗದ ತಕರಾರಿಗೆ ಸಂಬಂಧಿಸಿ ಹಲ್ಲೆ ನಡೆದಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪೊಲೀಸರು ಅವರ ಹೇಳಿಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಸಂಜೆಯ ವೇಳೆ ಪೌಝಿಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರ ಮನೆಯವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next