Advertisement
ಕೊಲ್ಲಿ ರಾಷ್ಟ್ರದಿಂದ ಊರಿಗೆ ಮರಳಿದ್ದ ಕಳನಾಡು ನಿವಾಸಿಯ 19, 14, ಮತ್ತು 8 ವರ್ಷದ ಮಕ್ಕಳು ಮತ್ತು ದುಬಾೖಯಿಂದ ಮರಳಿದ್ದ ಬೆಂಡಿಚ್ಚಾಲ್ 46 ವರ್ಷದ ವ್ಯಕ್ತಿ ಗುರುವಾರ ಸೋಂಕು ದೃಢಪಟ್ಟ ಜಿಲ್ಲೆಯ ನಾಲ್ವರಾಗಿದ್ದಾರೆ.
ಇದೇ ವೇಳೆ ಗಂಭೀರ ಸ್ಥಿತಿಯಲ್ಲಿದ್ದ ಇಟಲಿ ಮತ್ತು ಯುಕೆಯ 8 ಮಂದಿ ಪ್ರಜೆಗಳ ಸಹಿತ 13 ಮಂದಿ ಸೋಂಕಿ ನಿಂದ ಪೂರ್ಣವಾಗಿ ಗುಣಮುಖರಾಗಿದ್ದಾರೆ. ಇವರಲ್ಲಿ ಒಬ್ಬರು ತಿರುವನಂತಪುರ ಮತ್ತು 7 ಮಂದಿ ಎರ್ನಾಕುಳಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುಣಮುಖರಾದ ವಿದೇಶಿಗರಲ್ಲಿ 76 ಮತ್ತು 83 ವರ್ಷ ಪ್ರಾಯದವರೂ ಇದ್ದಾರೆ. ಯುಎಸ್‌ನಲ್ಲಿ ಮತ್ತೆ 3 ಸಾವು
ಕೋವಿಡ್ 19 ವೈರಸ್ ಸೋಂಕಿತ 3 ಮಂದಿ ಕೇರಳಿಗರು ಯುಎಸ್‌ನಲ್ಲಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಕೋವಿಡ್ 19ದಿಂದ ವಿದೇಶ ಮತ್ತು ಅನ್ಯರಾಜ್ಯಗಳಲ್ಲಿ ಸಾವಿಗೀಡಾದವರ ಸಂಖ್ಯೆ 24ಕ್ಕೇರಿತು. ಈ ಪೈಕಿ 15 ಮಂದಿ ಯುಎಸ್‌ನಲ್ಲಿ ಮೃತಪಟ್ಟವರು.
Related Articles
ಮುಂಬಯಿಯಲ್ಲಿ ಹೊಟೇಲ್ ನಡೆಸುತ್ತಿರುವ ಮಂಗಲ್ಪಾಡಿಯ 63ರ ಹರೆಯದ ನಿವಾಸಿಯನ್ನು ಕೋವಿಡ್ 19 ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮುಂಬಯಿಯ ಭಾಭಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಜತೆ ಯಲ್ಲಿರುವ ಇಬ್ಬರು ಮಲಯಾಳಿಗಳ ಸಹಿತ ಐವರು ಹಾಗೂ ಹತ್ತಿರದ ಕೊಠಡಿಯಲ್ಲಿ ವಾಸಿಸುತ್ತಿದ್ದ 9 ಮಂದಿಯನ್ನು ನಿಗಾದಲ್ಲಿರಿಸಲಾಗಿದೆ.
Advertisement
ಮೆಡಿಕಲ್ ಸರ್ಟಿಫಿಕೆಟ್ ನೀಡಲು ಹೆಚ್ಚುವರಿ ಸೌಲಭ್ಯಚಿಕಿತ್ಸೆಗೆಂದು ಮಂಗಳೂರಿಗೆ ತೆರಳುವ ರೋಗಿಗಳಿಗೆ ಮೆಡಿಕಲ್ ಸರ್ಟಿಫಿಕೆಟ್ ನೀಡುವ ನಿಟ್ಟಿನಲ್ಲಿ ಹೆಚ್ಚುವರಿ ಸೌಲಭ್ಯ ಒದಗಿಸಲಾಗಿದೆ. ಹೆಚ್ಚುವರಿ ಮಾಹಿತಿಗೆ ಮಂಜೇಶ್ವರ ಸಿಎಚ್‌ಸಿಯ ಮೆಡಿಕಲ್ ಆಫೀಸರ್ ಡಾ| ಶೈನಾ (9945560213) ಅವರನ್ನು ಸಂಪರ್ಕಿಸಬಹುದು. 62 ಕೇಸು; 130 ಮಂದಿ ಸೆರೆ
ಲಾಕ್‌ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಎ. 8ರಂದು 62 ಕೇಸು ಗಳನ್ನು ದಾಖಲಿಸಲಾಗಿದೆ. 130 ಮಂದಿಯನ್ನು ಬಂಧಿಸಲಾಗಿದ್ದು, 27 ವಾಹನಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಕಾಸರಗೋಡು ನಗರ ಠಾಣೆ ಯಲ್ಲಿ 1, ಕುಂಬಳೆ 1, ಮಂಜೇಶ್ವರ 6, ಆದೂರು 2, ಬೇಕಲ 2, ಬೇಡಗಂ 2, ಚಿತ್ತಾರಿಕಲ್ 3, ಚೀಮೇನಿ 2, ಮೇಲ್ಪರಂಬ 20, ರಾಜಪುರಂ 3, ವೆಳ್ಳರಿಕುಂಡ್ 4, ಚಂದೇರ 8, ನೀಲೇಶ್ವರ 2 ಕೇಸುಗಳನ್ನು ದಾಖಲಿಸಲಾಗಿದೆ. ಈ ವರೆಗೆ ಜಿಲ್ಲೆಯಲ್ಲಿ 605 ಕೇಸು ದಾಖಲಿಸಿ, 968 ಮಂದಿಯನ್ನು ಬಂಧಿಸಲಾಗಿದೆ. 379 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಗತ್ಯ ಬಿದ್ದರೆ ಕಾಪ್ಟರ್ ಬಳಕೆ
ರಾಜ್ಯದಲ್ಲಿ ಈ ವರೆಗೆ 357 ಮಂದಿಯಲ್ಲಿ ಸೋಂಕು ದೃಢವಾಗಿದೆ. ಪ್ರಸ್ತುತ ಆಸ್ಪತ್ರೆಗಳಲ್ಲಿ 258 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 14 ಜಿಲ್ಲೆಗಳಲ್ಲೂ ಪ್ರಯೋಗಾಲಯ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಕಾಸರಗೋಡು ಗಡಿಯ ಮೂಲಕ ಕರ್ನಾಟಕಕ್ಕೆ ರೋಗಿಗಳಿಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿಯಿದೆ. ಗುರುವಾರ ಚಿಕಿತ್ಸೆ ಲಭಿಸದೆ ಒಬ್ಬರು ಸಾವಿಗೀಡಾಗಿದ್ದಾರೆ. ಈ ಪರಿಸ್ಥಿತಿ ಬರದಂತೆ ರೋಗಿಗಳನ್ನು ರಾಜ್ಯದ ಪ್ರಮುಖ ಆಸ್ಪತ್ರೆಗಳಿಗೆ ಕೊಂಡೊಯ್ಯಲು ಅಗತ್ಯ ಬಿದ್ದರೆ ಹೆಲಿಕಾಪ್ಟರ್ ಬಳಸಲಾಗುವುದು ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.