Advertisement

ಆಟೋ ರಿಕ್ಷಾ-ಕಾರು ಢಿಕ್ಕಿ: 3 ಮಹಿಳೆಯರ ಸಹಿತ ನಾಲ್ವರ ಸಾವು

07:15 PM Dec 30, 2017 | Team Udayavani |

ಮಚಲೀಪಟ್ಟಣ, ಆಂಧ್ರ ಪ್ರದೇಶ : ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಮ್ಯಾಲಾವರಂ ಎಂಬಲ್ಲಿಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ  ಒಂದೇ ಕುಟುಂಬದ ಮೂವರು ಮಹಿಳೆಯರ ಸಹಿತ ನಾಲ್ವರು ಮೃತಪಟ್ಟರು. 

Advertisement

30ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ರಿಕ್ಷಾ ಒಂದು ಕಾರಿಗೆ ಮುಖಾಮುಖೀ ಢಿಕ್ಕಿ ಹೊಡೆದ ಕಾರಣ ಆಟೋ ದಲ್ಲಿದ್ದ ಮೂವರು ಮಹಿಳೆಯರು ಮತ್ತು ಆಟೋ ಚಾಲಕ ಮೃತಪಟ್ಟರು. ಇಂದು ಮಧ್ಯಾಹ್ನ ಈ ದುರ್ಘ‌ಟನೆ ಸಂಭವಿಸಿತು.

ಮೃತರನ್ನು ಜಿ ನಾಗಮಣಿ, ಎಸ್‌ ಲತಾ, ಎಂ ಮೇರಿ ಮತ್ತು ಆಟೋ ಚಾಲಕ ಜಿ ನಾಗೇಶ್ವರ ಎಂದು ಗುರುತಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next