Advertisement

ಕೊಪ್ಪಳದಲ್ಲಿ 3 ವರ್ಷದ ಮಗು ಸೇರಿ ನಾಲ್ವರಿಗೆ ಕೋವಿಡ್ ಸೋಂಕು ದೃಢ

06:15 PM Jun 15, 2020 | keerthan |

ಕೊಪ್ಪಳ: ಜಿಲ್ಲೆಯ ಮೂರು ವರ್ಷದ ಮಗು ಸೇರಿ ನಾಲ್ವರಿಗೆ ಸೋಮವಾರ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಸುನೀಲ್ ಕುಮಾರ ಅವರು ದೃಢಪಡಿಸಿದ್ದಾರೆ.

Advertisement

ಕುಕನೂರು ತಾಲೂಕಿನ 33 ವರ್ಷದ ವ್ಯಕ್ತಿ, ಗಂಗಾವತಿ ನಗರದ 3 ವರ್ಷದ ಮಗು, ಗಂಗಾವತಿ ತಾಲೂಕಿನ ಮರಳಿ ಗ್ರಾಮದ 45 ವರ್ಷದ ಮಹಿಳೆ ಹಾಗೂ 50 ವರ್ಷದ ಪುರುಷನಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಇನ್ನು ಬಳಗೇರಿ ವ್ಯಕ್ತಿಯು ಮಹಾರಾಷ್ಟ್ರದಿಂದ ಆಗಮಿಸಿದ್ದರೆ, ಗಂಗಾವತಿ ನಗರದ 3 ವರ್ಷದ ಮಗು ಹಾಗೂ ತಾಯಿ ಮುಂಬೈನಿಂದ ಆಗಮಿಸಿದ್ದರು. ಇನ್ನು ಮರಳಿ ಇಬ್ಬರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಈ ನಾಲ್ವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾರಂಭಿಸಿದೆ. ಇನ್ನೂ 3 ವರ್ಷದ ಮಗುವಿನ ಮೇಲೆ ಹೆಚ್ಚು ನಿಗಾ ಇರಿಸಿದ್ದು, ಅಗತ್ಯವಿದ್ದಲ್ಲಿ ಮಗುವಿನ ತಾಯಿಗೆ ಪಿಪಿ ಕಿಟ್ ನೀಡಿ ಮಗುವಿನ ಆರೈಕೆಯ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿ ಸುನೀಲ್ ಕುಮಾರ ಅವರು ತಿಳಿಸಿದ್ದಾರೆ.

ಇನ್ನೂ ಜಿಲ್ಲೆಯ ಬಳಗೇರಿ, ಮರಳಿ ಹಾಗೂ ಗಂಗಾವತಿಯ ಕೆಲವು ಭಾಗಗಳನ್ನ ಸೀಲ್ ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ. ಈ ನಾಲ್ವರಿಗೆ ಸಂಖ್ಯೆಯ ಕುರಿತು ರಾಜ್ಯ ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟ ಮಾಡುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next